ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ವಾಕ್ಸಿನೇಷನ್ ಎರಡನೇ ಹಂತ ನಾಳೆಯಿಂದ ಆರಂಭಗೊಳ್ಳಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಮೊದಲ ಹಂತದಲ್ಲಿ 6328 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ವಾಕ್ಸೀನ್ ನೀಡಲಾಯಿತು. ಎರಡನೇ ಹಂತದಲ್ಲಿ ಮುಂಗಡ ನೋಂದಣಿ ನಡೆಸಿರುವ ಪೆÇಲೀಸ್, ಕಂದಾಯ, ಸ್ಥಳೀಯಾಡಳಿತ ಸಿಬ್ಬಂದಿಯಾಗಿರುವ 4553 ಮಂದಿಗೆ ವಾಕ್ಸಿನೇಷನ್ ನಡೆಸಲಾಗುವುದು. ಶುಕ್ರ, ಶನಿ, ಭಾನುವಾರಗಳಲ್ಲಿ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಮೊದಲ ಡೋಸ್ ಕೋವಿಡ್ ವಾಕ್ಸೀನ್ ನೀಡಲಾಗುವುದು. ದ್ವಿತೀಯ ಹಂತದ ಮೊದಲ ದಿನ ಕಾಞಂಗಾಡ್ ಜಿಲ್ಲಾ ಆಸ್ಪತ್ರೆ, ಕಾಸರಗೋಡು ಜನರಲ್ ಆಸ್ಪತ್ರೆ, ನೀಲೇಶ್ವರ ತಾಲೂಕು ಆಸ್ಪತ್ರೆ, ಚೆರುವತ್ತೂರು ಸಮಾಜ ಆರೋಗ್ಯ ಕೇಂದ್ರಗಳಲ್ಲಿ ವಾಕ್ಸೀನ್ ವಿತರಣೆ ಜರುಗಲಿದೆ. ಸಿಬ್ಬಂದಿಯ ಮೊಬೈಲ್ ಫೆÇೀನ್ ನಲ್ಲಿ ಎಸ್.ಎಂ.ಎಸ್. ಲಭಿಸಿದ ತಕ್ಷಣ ಆಯಾ ಕೇಂದ್ರಗಳಿಗೆ ಹಾಜರಾಗಿ ವಾಕ್ಸೀನ್ ಪಡೆದುಕೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.






