ಕಾಸರಗೋಡು: ರಾಜ್ಯ ಮಹಿಳಾ ಆಯೋಗ ಮತ್ತು ಜಿಲ್ಲಾಡಳಿತೆಯ ನೇತೃತ್ವದಲ್ಲಿ ಜಿಲ್ಲೆಯ ತ್ರಿಸ್ತರ ಪಂಚಾಯತ್, ನಗರಸಭೆ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗಾಗಿ ನಡೆಸಲಾಗುವ ಜಾಗ್ರತಾ ಸಮಿತಿ ಕಾರ್ಯಾಗಾರ ಇಂದು(ಫೆ.12ರಂದು) ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು.
ಮಹಿಳೆಯರ ಸುರಕ್ಷೆ ಸಂಬಂಧ ಪಂಚಾಯತ್, ವಾರ್ಡ್ ಮಟ್ಟದ ಜನಜಾಗೃತಿ ಸಮಿತಿಗಳ ಹೊಣೆ, ಅಧಿಕಾರ, ಅವರು ನಡೆಸಬೇಕಾದ ಕ್ರಮಗಳು ಇತ್ಯಾದಿಗಳ ಬಗ್ಗೆ ತರಬೇತಿ ಈ ವೇಳೆ ನೀಡಲಾಗುವುದು ಎಂದು ಆಯೋಗ ಸದಸ್ಯೆ ಷಾಹಿದಾ ಕಮಾಲ್ ಅವರು ತಿಳಿಸಿದರು. ಜನಜಾಗೃತಿ ಸಮಿತಿಗಳನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ಆಯೋಗ ರಾಜ್ಯದಲ್ಲಿ ನಡೆಸುತ್ತಿರುವ ಪ್ರಥಮ ಕಾರ್ಯಾಗಾರ ಇದಾಗಿದೆ.




