ಬದಿಯಡ್ಕ: ರಾಜ್ಯದ 14 ಸಪ್ಲೈಕೊ ಮಳಿಗೆಗಳನ್ನು ಬುಧವಾರ ರಾಜ್ಯ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿ.ಎಸ್. ತಿಲೋತ್ತಮನ್ ಅವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಸಚಿವರು ರಾಜ್ಯದಲ್ಲಿ ಸಪ್ಲೈಕೊ 1611 ಮಳಿಗೆಗಳನ್ನು ಹೊಂದಿದೆ. ಐದು ವರ್ಷಗಳಲ್ಲಿ, ಸಪ್ಲೈಕೊ 98 ಹೊಸ ಮಳಿಗೆಗಳನ್ನು ಮತ್ತು 194 ನವೀಕರಿಸಿದ ಮಳಿಗೆಗಳನ್ನು ಆರಂಭಿಸಿದೆ ಎಂದರು. ನಾಗರಿಕ ಸರಬರಾಜು ಇಲಾಖೆಯ ಮಾವೇಲಿ ಮಳಿಗೆಗಳನ್ನು ರಾಜ್ಯದ ಎಲ್ಲಾ ಪಂಚಾಯಿತಿಗಳಲ್ಲಿ ಲಭ್ಯವಾಗುವಂತೆ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ಸಚಿವರು ತಿಳಿಸಿದರು.
ಕಾಸರಗೋಡು ಜಿಲ್ಲೆಯ ಮಧೂರು, ಕುಂಬ್ಡಾಜೆ ಮತ್ತು ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿಗಳಲ್ಲಿ ಮಾವೇಲಿ ಮಳಿಗೆಗಳು ಈ ಮೂಲಕ ಆರಂಭಗೊಂಡವು. ಕಾಸರಗೋಡು ಜಿಲ್ಲೆಯ ಎಲ್ಲಾ ಪಂಚಾಯಿತಿಗಳಲ್ಲಿ ಮಾವೇಲಿ ಮಳಿಗೆಗಳು ಇರಲಿವೆ ಎಂದು ಸಚಿವರು ಹೇಳಿದರು.
ಮಧೂರು ಗ್ರಾಮ ಪಂಚಾಯತಿಯ ಉಳಿಯತ್ತಡ್ಕ, ಕುಂಬ್ಡಾಜೆ ಗ್ರಾಮ ಪಂಚಾಯತಿಯ ಜಯನಗರ ಮತ್ತು ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತಿಯ ಬದರ್ ನಗರಗಳಲ್ಲಿ ಉದ್ಘಾಟಿಸಲಾಯಿತು.
ಕುಂಬ್ಡಾಜೆ ಗ್ರಾಮ ಪಂಚಾಯಿತಿಯ ಜಯನಗರದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ವಹಿಸಿದ್ದರು. ಕುಂಬ್ಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಪಿ. ಹಮೀದ್ ಮೊದಲ ಮಾರಾಟ ಮಾಡಿದರು. ಉಪಾಧ್ಯಕ್ಷ ಎಲಿಜಬೆತ್ ಕ್ರಾಸ್ತಾ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಫೀಕ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಖದೀಜಾ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಜೀವ ಶೆಟ್ಟಿ ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಟಿ.ಕೆ. ನಾರಾಯಣನ್ ನಂಬಿಯಾರ್, ಮ್ಯಾಥ್ಯೂ ತೆಂಗಂಪಲ್ಲಿ, ಪ್ರಸಾದ ಭಂಡಾರಿ, ಅಬೂಬಕರ್, ರವೀಂದ್ರ ರೈ ಗೋಸಾಡೆ, ಅನಂತನ್ ನಂಬಿಯಾರ್, ಕರಿವೆಳ್ಳೂರ್ ವಿಜಯನ್, ಕೆ.ಪಿ.ಮುನೀರ್, ದಾಮೋದರನ್, ರೆಜಿಲೇಶ್ ಮಾತನಾಡಿದರು. ಸಪ್ಲೈಕೋ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಲಿ ಅಜರ್ ಪಾಷಾ ಸ್ವಾಗತಿಸಿ, ಜಿಲ್ಲಾ ಸರಬರಾಜು ಅಧಿಕಾರಿ ಕೆ.ಎಸ್. ಶಂಸುದ್ದೀನ್ ವಂದಿಸಿದರು.
ಮಧೂರು ಗ್ರಾಮ ಪಂಚಾಯತಿ ಕಚೇರಿ ಇರುವ ಉಳಿಯತ್ತಡ್ಕದಲ್ಲಿ ನಿರ್ಮಿಸಿರುವ ಮಾವೇಲಿ ಅಂಗಡಿಯ ಉದ್ಘಾಟನಾ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸ್ಮಿಜಾ ವಿನೋದ್, ಜಿಲ್ಲಾ ಪಂಚಾಯತಿ ಸದಸ್ಯ ಜಾಸ್ಮಿನ್. ಕಬೀರ್ ಚೆರ್ಕಳ, ಬ್ಲಾಕ್ ಪಂಚಾಯತಿ ಸದಸ್ಯ ಜಮೀಲಾ ಅಹ್ಮದ್, ವಾರ್ಡ್ ಸದಸ್ಯ ಕೆ. ರತೀಶ್, ವಿವಿಧ ರಾಜಕೀಯ ಪಕ್ಷದ ಮುಖಂಡರಾದ ರವೀಂದ್ರ ರೈ, ಎಂ.ಕೆ. ರವೀಂದ್ರನ್, ಕೆ.ಟಿ. ಕಿಶೋರ್, ಕರಿವೆಳ್ಳೂರ್ ವಿಜಯನ್, ಕೆ.ಟಿ.ಉಮೇಶ್ ಮತ್ತು ರಾಧಾಕೃಷ್ಣ ಸೂರ್ಯ ಅವರು ಶುಭಾಶಂಸನೆಗೈದರು. ಡಿಪೆÇೀ ಪ್ರಬಂಧಕ ನಾರಾಯಣನ್ ಕುಟ್ಟಿ ವಂದಿಸಿದರು.
ಮೊಗ್ರಾಲ್ ಪುತ್ತೂರಿನ ಬದರ್ ನಗರದಲ್ಲಿ ಆರಂಭಿಸಲಾದ ಮಾವೇಲಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನ್ಯಾಯವಾದಿ. ಶಮೀರಾ ಫೈಸಲ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತಿ ಉಪಾಧ್ಯಕ್ಷ ಮುಜೀಬ್ ಕಂಬಾರ್ ಮೊದಲ ಮಾರಾಟ ಮಾಡಿದರು. ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಮೊಹಮ್ಮದ್ ರಫೀಕ್ ಕುನ್ನಿಲ್, ಕೆ. ಸುನೀಲ್ ಕುಮಾರ್, ಹಮೀದ್ ಪುರಪ್ಪಾಡಿ, ಖಲೀಲ್, ಆರ್.ವಿ.ಜಯಕುಮಾರ್, ಬಿ.ಎಸ್.ಜಮಾಲ್, ಕೆ. ಅಶೋಕ್ ಮತ್ತು ಇತರರು ಮಾತನಾಡಿದರು. ಅಶೋಕ್ ಉಸ್ತುವಾರಿ ವಹಿಸಿದ್ದರು.






