ಉಪ್ಪಳ: ಗುಜರಾತ್‍ನ ನವಸಾರಿ ಅಗ್ರಿಕಲ್ಚರಲ್ ಯುನಿವರ್ಸಿಟಿಯಲ್ಲಿ ಎಂಬಿಎ ಇನ್ ಅಗ್ರಿ ಬಿಸಿನೆಸ್ ಮೇನೇಜ್‍ಮೆಂಟ್‍ನಲ್ಲಿ ಪೈವಳಿಕೆ ಸಮೀಪದ ರಶ್ಮಿ ಭಟ್ ಕಟ್ಟದಮನೆ ತನ್ನ ಅದ್ವಿತೀಯ ಸಾಧನೆಗಾಗಿ ಚಿನ್ನದ ಪದಕವನ್ನು ಪಡೆದರು. ಇತ್ತೀಚೆಗೆ ನಡೆದ 16ನೇ ಘಟಿಕೋತ್ಸವದಲ್ಲಿ ಗುಜರಾತ್ ರಾಜ್ಯಪಾಲರಿಂದ ಚಿನ್ನದ ಪದಕ ಹಾಗೂ ಪ್ರಶಸ್ತಿಪತ್ರವನ್ನು ಪಡೆದ ಈಕೆ ಗೋಪಾಲಕೃಷ್ಣ ಭಟ್ ಮತ್ತು ರೇಖಾ ಭಟ್ ಕಟ್ಟದಮನೆ ದಂಪತಿಗಳ ಸುಪುತ್ರಿ.





