HEALTH TIPS

ಇಚ್ಲಂಗೋಡು ಶ್ರೀಮಹಾವಿಷ್ಣುಮೂರ್ತಿ ಹಾಗೂ ಕೆದ್ವಾರು ಶ್ರೀಸದಾಶಿವ ದೇವಾಲಯಗಳ ವಾರ್ಷಿಕ ಜಾತ್ರೋತ್ಸವ ಇಂದಿನಿಂದ

                             

           ಉಪ್ಪಳ: ಬಂದ್ಯೋಡು ಸಮೀಪದ ಇಚ್ಲಂಗೋಡು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನ ಮತ್ತು ಕೆದ್ವಾರು ಶ್ರೀಸದಾಶಿವ ದೇವಸ್ಥಾನಗಳ ವಾರ್ಷಿಕ ಜಾತ್ರಾ ಮಹೋತ್ಸವ ಇಂದಿನಿಂದ(ಫೆ.14 ರಿಂದ)ಆರಂಭಗೊಳ್ಳಲಿದೆ. 


     ಶ್ರೀಮಹಾವಿಷ್ಣುಮೂರ್ತಿ ದೇವರ ವಾರ್ಷಿಕ ಮಹೋತ್ಸವವು ಇಂದು ತಂತ್ರಿವರ್ಯ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ನಿನ್ನೆ ರಾತ್ರಿ 8ಕ್ಕೆ ಶ್ರೀದೇವರ ಪೂಜೆ, ಮಂಗಳಾರತಿ, ಶ್ರೀಗಣಪತಿ ಪ್ರಾರ್ಥನೆ, ಕಾಣಿಕೆಕಾಯಿ ಇಡುವುದು, ಪ್ರಸಾದ ವಿತರಣೆ ನಡೆಯಿತು. 


     ಇಂದು ಬೆಳಿಗ್ಗೆ 6 ರಿಂದ ವೇದಪಾರಾಯಣ ಕಲಶ ಪ್ರತಿಷ್ಠೆ, ಶಾಕಲ ಋಕ್ ಸಂಹಿತಾ ಪಾರಾಯಣ ಪ್ರಾರಂಭ, 7ಕ್ಕೆ ಬೆಳಗ್ಗಿನ ಪೂಜೆ, 9 ರಿಂದ ವೇದನಾರಾಯಣ ಕಲಶಾಭಿಷೇಕ, ವಿಶೇಷ ಪೂಜೆ, 9.30 ರಿಂದ ನವಕ ಕಲಶ ಪ್ರತಿಷ್ಠೆ, ಗಣಪತಿ ಹೋಮ ಪ್ರಾರಂಭ, 10ಕ್ಕೆ ಶ್ರೀಕೋಮಾರುಚಾಮುಂಡಿ ದೈವದ ಭಂಡಾರ ಆಗಮನ, 10.30 ರಿಂದ ಗಣಪತಿ ಹೋಮ ಪೂರ್ಣಾಹುತಿ, ನವಕ ಕಲಶಾಭಿಷೇಕ, ಪೂಜೆ, 11.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 1ಕ್ಕೆ ಶ್ರೀದೇವರ ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ರಿಂದ ಭಜನೆ, 6.45 ರಿಂದ ಸಹಸ್ರ ದೀಪೋತ್ಸವ ಸಹಿತ ದೀಪಾರಾಧನೆ, ಮಂಗಳಾರತಿ, ರಾತ್ರಿ 7 ರಿಂದ ತಾಯಂಬಕ, 7.30 ರಿಂದ ಅನ್ನಸಂತರ್ಪಣೆ, 8.30 ರಿಂದ ರಂಗಪೂಜೆ, 9 ರಿಂದ ಉತ್ಸವ, ದರ್ಶನ ಬಲಿ, ವಿಶೇಷ ಬೆಡಿ ಸೇವೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ಹಾಗೂ ರಾತ್ರಿ 1 ರಿಂದ ಶ್ರೀಕೋಮಾರುಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ. ಫೆ.15 ರಂದು ಬೆಳಿಗ್ಗೆ 7 ರಿಂದ ಶುದ್ದಿ ಕಲಶ, ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

       ಕೆದ್ವಾರು ಸದಾಶಿವ ದೇವಸ್ಥಾನದ ಪ್ರತಿಷ್ಠಾ ದಿನ ಮಹೋತ್ಸವವು ಫೆ. 17 ರಂದು ಬಂಬ್ರಾಣ ಬೂಡು ಬ್ರಹ್ಮಶ್ರೀ ಶಂಕರನಾರಾಯಣ ಕಡಮಣ್ಣಾಯರ ನೇತೃತ್ವದಲ್ಲಿ ನಡೆಯಲಿದೆ.   

     ಕಾರ್ಯಕ್ರಮದ ಅಂಗವಾಗಿ 17 ರಂದು ಬೆಳಿಗ್ಗೆ 7.30 ಕ್ಕೆ ಬೆಳಗಿನ ಪೂಜೆ, 8 ರಿಂದ ಪಂಚಗವ್ಯ, ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ, ತಂಬಿಲ, 11 ರಿಂದ ಇಚ್ಲಂಗೋಡು ಮಲೆಂದೂರಿನ ಶ್ರೀಶಾರದಾಂಬ ಮಹಿಳಾ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12.ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಕ್ಕೆ ದುರ್ಗಾ ನಮಸ್ಕಾರ ಪೂಜೆ ಪ್ರಾರಂಭ, ಸಂಜೆ  6.30 ರಿಂದ ಚೆಂಡೆವಾದನ, 7.30 ರಿಂದ ಅಡ್ಕದ ಶ್ರೀಅಯ್ಯಪ್ಪ ಕುಣಿತ ಭಜನಾ ಸಂಘದಿಂದ ಭಜನಾ ಸಂಕೀರ್ತನೆ, 8.30 ರಿಂದ ಉತ್ಸವ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಲಿದೆ.        



     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries