HEALTH TIPS

ಮಾರ್ಚ್‌ನಲ್ಲಿ ಬ್ಯಾಂಕುಗಳಿಗೆ ಬರೋಬ್ಬರಿ 11 ದಿನ ರಜೆ !

        ನವದೆಹಲಿ : ಮಾರ್ಚ್‌ನಲ್ಲಿ ದೇಶಾದ್ಯಂತದ ಬ್ಯಾಂಕುಗಳಿಗೆ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜಾ ದಿನಗಳು ಸೇರಿದಂತೆ ಒಟ್ಟು 11 ದಿನಗಳ ಕಾಲ ರಜೆ ಬಂದಿದೆ .


          ರಿಸರ್ವ್ ಬ್ಯಾಂಕ್ ಕ್ಯಾಲೆಂಡರ್ ಇಯರ್ ಪ್ರಕಾರ, ಮಾರ್ಚ್‌ನಲ್ಲಿ ವಿವಿಧ ರಾಜ್ಯಗಳಲ್ಲಿ ಐದು ದಿನಗಳ ರಜೆಯಾಗಿದೆ. ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಮಾರ್ಚ್ 5, 11, 22, 29 ಮತ್ತು 30 ರಂದು ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿದೆ.

       ಮಾರ್ಚ್‌ನಲ್ಲಿ ಆಯಾ ಬ್ಯಾಂಕ್‌ಗಳಿಗೆ ಭೇಟಿ ನೀಡಲು ಬಯಸುವವರು ರಜಾದಿನಗಳಿಗೆ ಅನುಗುಣವಾಗಿ ಅವರು ತಮ್ಮ ಯೋಜನೆ ರೂಪಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳು ಸೂಚಿಸಿದ್ದಾರೆ. ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ವ್ಯವಹಾರಗಳು ಎಂದಿನಂತೆ ಕೆಲಸ ಮಾಡುತ್ತವೆ. ಗ್ರಾಹಕರು ಆನ್‌ಲೈನ್‌ನಲ್ಲಿ ವಹಿವಾಟು ನಡೆಸಬಹುದು.

ಮಾರ್ಚ್ 2021 ರಲ್ಲಿ ಬ್ಯಾಂಕ್ ರಜಾದಿನಗಳು: ಈ ಕೆಳಕಂಡಂತಿವೆ.

5 ಮಾರ್ಚ್ 2021: ಚಾಪರ್ ಕುಟ್ (ಮಿಜೋರಾಂ)

7 ಮಾರ್ಚ್ 2021: ಭಾನುವಾರ

11 ಮಾರ್ಚ್ 2021: ಮಹಾಶಿವರಾತ್ರಿ

13 ಮಾರ್ಚ್ 2021: ಎರಡನೇ ಶನಿವಾರ

14 ಮಾರ್ಚ್ 2021: ಭಾನುವಾರ

21 ಮಾರ್ಚ್ 2021: ಭಾನುವಾರ

22 ಮಾರ್ಚ್ 2021: ಬಿಹಾರ ದಿನ

27 ಮಾರ್ಚ್ 2021: ನಾಲ್ಕನೇ ಶನಿವಾರ

28 ಮಾರ್ಚ್ 2021: ಭಾನುವಾರ

29 ಮಾರ್ಚ್ 2021: ಧುಲೇತಿ / ಯೋಸಾಂಗ್ ಎರಡನೇ ದಿನ

30 ಮಾರ್ಚ್ 2021: ಹೋಳಿ

       ಅಲ್ಲದೆ, ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಹಲವಾರು ಬ್ಯಾಂಕ್ ಒಕ್ಕೂಟಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡುತ್ತಿರುವುದರಿಂದ ಮಾರ್ಚ್‌ನಲ್ಲಿ ಎರಡು ದಿನಗಳವರೆಗೆ ಬ್ಯಾಂಕುಗಳು ಮುಚ್ಚುವ ಸಾಧ್ಯತೆಯಿದೆ. ಈ ಎರಡು ದಿನಗಳ ಮುಷ್ಕರ ಮಾರ್ಚ್ 15, 16 ರಂದು ನಡೆಯಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries