HEALTH TIPS

ರಾಜ್ಯದಲ್ಲಿ ಇಂದು 1899 ಮಂದಿಗೆ ಕೊರೊನಾ ಸೋಂಕು-ಕಾಸರಗೋಡು:104 ಮಂದಿಗೆ ಸೋಂಕು ಪತ್ತೆ

                              

         ತಿರುವನಂತಪುರ: ರಾಜ್ಯದಲ್ಲಿ ಇಂದು 1899 ಜನರಿಗೆ ಕೋವಿಡ್ -19 ಖಚಿತಪಡಿಸಲಾಗಿದೆ. ಕೋಝಿಕೋಡ್ 213, ತಿರುವನಂತಪುರ 200, ಕೊಲ್ಲಂ 188, ಎರ್ನಾಕುಳಂ 184, ಕಣ್ಣೂರು 161, ಕೊಟ್ಟಾಯಂ 158, ಪತ್ತನಂತಿಟ್ಟು 148, ಮಲಪ್ಪುರಂ 146, ತ್ರಿಶೂರ್ 131, ಆಲಪ್ಪುಳ 121, ಕಾಸರಗೋಡು 104,ಪಾಲಕ್ಕಾಡ್ 67, ಇಡುಕ್ಕಿ 54, ವಯನಾಡ್ 24 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 


        ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಿಂದ ಆಗಮಿಸಿದ ಯಾರಲ್ಲೂ ಕೋವಿಡ್ -19  ಖಚಿತಪಡಿಸಿಲ್ಲ.  ಯುಕೆ (101), ದಕ್ಷಿಣ ಆಫ್ರಿಕಾ (4) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 106 ಜನರಿಗೆ ಈವರೆಗೆ ಸೋಂಕು ದೃಢಪಡಿಸಲಾಗಿದ್ದು, ಈ ಪೈಕಿ 96 ಜನರಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಟ್ಟ ವೈರಸ್ ಇರುವುದು ಪತ್ತೆಯಾಗಿದೆ.

        ಕಳೆದ 24 ಗಂಟೆಗಳಲ್ಲಿ 54,314 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ. 3.5. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ. ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,25,05,085 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

           ಕಳೆದ 24 ಗಂಟೆಗಳಲ್ಲಿ 15 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿರುವುದಾಗಿ ದ್ಢಡಿಸಲಾಗಿದೆ. ಒಟ್ಟು ಸಾವಿನ ಸಂಖ್ಯೆ  4,450 ಕ್ಕೆ ಏರಿಕೆಯಾಗಿದೆ.

         ಇಂದು, ಸೋಂಕು ಪತ್ತೆಯಾದವರಲ್ಲಿ 64 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 1643 ಜನರಿಗೆ ಸೋಂಕು ತಗಲಿತು. 173 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 188, ತಿರುವನಂತಪುರ 132, ಕೊಲ್ಲಂ 182, ಎರ್ನಾಕುಳಂ 177, ಕಣ್ಣೂರು 108, ಕೊಟ್ಟಾಯಂ 152, ಪತ್ತನಂತಿಟ್ಟು 134, ಮಲಪ್ಪುರಂ 138, ತ್ರಿಶೂರ್ 123, ಆಲಪ್ಪುಳ 115, ಕಾಸರಗೋಡು 100, ಪಾಲಕ್ಕಾಡ್ 24, ಇಡುಕ್ಕಿ 49, ವಯನಾಡ್ 21 ಎಂಬಂತೆ ಸಂಪರ್ಕದ ಮೂಲಕ ಸೋಂಕು ಉಂಟಾಗಿದೆ. 

     ಇಂದು 19 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 9, ಪತ್ತನಂತಿಟ್ಟು 3, ಎರ್ನಾಕುಳಂ 2, ತಿರುವನಂತಪುರ, ಇಡುಕಿ, ಕೋಝಿಕೋಡ್, ವಯನಾಡ್ ಮತ್ತು ಕಾಸರಗೋಡು ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರು ಸೋಂಕಿಗೊಳಗಾಗಿರುವರು. 

       ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2119 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 114, ಕೊಲ್ಲಂ 98, ಪತ್ತನಂತಿಟ್ಟು 206, ಆಲಪ್ಪುಳ 116, ಕೊಟ್ಟಾಯಂ 105, ಇಡಕ್ಕಿ 72, ಎರ್ನಾಕುಳಂ 206, ತ್ರಿಶೂರ್ 200, ಪಾಲಕ್ಕಾಡ್ 60, ಮಲಪ್ಪುರಂ 175, ಕೋಝಿಕೋಡ್ 315, ವಯನಾಡ್ 75, ಕಣ್ಣೂರು 286, ಕಾಸರಗೋಡು 91 ಎಂಬಂತೆ ಇಂದು ನೆಗೆಟಿವ್ ಆಗಿದೆ. ಇದರೊಂದಿಗೆ 25,158 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,68,378 ಮಂದಿನ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.

         ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,31,924 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,28,032 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 3,892 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 459 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

         ಇಂದು ಹೊಸ ಹಾಟ್‍ಸ್ಪಾಟ್ ಇಲ್ಲ. ಎರಡು ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 353 ಹಾಟ್‍ಸ್ಪಾಟ್‍ಗಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries