HEALTH TIPS

ಒಡಿಯೂರು ಶ್ರೀಷಷ್ಟ್ಯಬ್ದ ಸಂಭ್ರಮ-ಮಾ. 7ರಂದು ಕಾಸರಗೋಡು ಸಾಹಿತ್ಯೋತ್ಸವ

      ಕಾಸರಗೋಡು: ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಷಷ್ಟ್ಯಬ್ದ ಸಂಭ್ರಮ ಕಾಸರಗೋಡು ವಲಯ ಸಮಿತಿಯ ತೃತೀಯ ಸರಣಿ ಕಾರ್ಯಕ್ರಮ 'ಕಾಸರಗೋಡು ಸಾಹಿತ್ಯೋತ್ಸವ' ಮಾ. 7ರಂದು ಬೆಳಗ್ಗೆ 9ರಿಂದ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಗ್ರಂಥಾಲಯದಲ್ಲಿ ಜರುಗಲಿದೆ.

       ಬೆಳಗ್ಗೆ 9ರಿಂದ ಕಾಸರಗೋಡು ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ಸಂಕೀರ್ತನಾ ಸಂಭ್ರಮ ನಡೆಯುವುದು. 10.30ಕ್ಕೆ ಒಡಿಯೂರು ಸಾಧ್ವಿ ಶ್ರೀಮಾತಾನಂದಮಯೀ ಸಮಾರಂಭ ಉದ್ಘಾಟಿಸುವರು. ಬೆಟ್ಟಂಪಾಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ನಿವೃತ್ತ ಪ್ರಾಧ್ಯಾಪಕ ಡಾ. ಉಪ್ಪಂಗಳ ಶಂಕರನಾರಾಯಣ ಭಟ್ ರಚಿಸಿರುವ 'ಕಾಸರಗೋಡು ಪರಿಸರದ ಸಂಸ್ಕøತ ಕನ್ನಡ ನಾಟಕ ರಚಕರು'ಕೃತಿ ಬಿಡುಗಡೆ ನಡೆಯುವುದು. 

        ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಎಂ.ಜಿ.ಆರ್ ಅರಸ್, ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ, ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ 1ರಿಂದ ಒಡಿಯೂರುಶ್ರೀ ಷಷ್ಟ್ಯಬ್ದ ಕಾವ್ಯ ನಮನ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಬಹುಭಾಷಾ ಕವಿಗೋಷ್ಠಿ ನಡೆಯುವುದು. ಸಾಯಂಕಾಲ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಕಾಸರಗೋಡು ವಲಯ ಸಮಿತಿ ಅಧ್ಯಕ್ಷ  ಕೆ.ಎನ್ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಕಾಸರಗೋಡು ವಲಯದಲ್ಲಿ ಕೋವಿಡ್-19 ನಿಯಂತ್ರಣದಲ್ಲಿ ಮುಂಚೂಣಿಯಲ್ಲಿದ್ದು ಸೇವೆ ಸಲ್ಲಿಸುತ್ತಿರುವ ಡಾ. ಸಿ.ಎಚ್ ಜನಾರ್ದನ ನಾಯ್ಕ್ ಅವರನ್ನು ಅಭಿನಂದಿಸಲಾಗುವುದು. ಸಾಯಂಕಾಲ 5.30ರಿಂದ ಸಾಂಸ್ಕøತಿಕ ವೈವಿಧ್ಯ ನಡೆಯುವುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries