ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಜೈಲಿನಲ್ಲಿದ್ದು ಆಕೆ ಇನ್ನಷ್ಟು ಬೆದರಿಕೆ ಮತ್ತು ಕಿರುಕುಳ ಎದುರಿಸುವಳು ಎಂದು ಕಸ್ಟಮ್ಸ್ ಶಂಕಿಸಿದೆ. ಮೇಲಧಿಕಾರಿಗಳ ವಿರುದ್ಧ ಹೇಳಿಕೆಗಳನ್ನು ನೀಡಿದ ಬಳಿಕ ಸ್ವಪ್ನಾಳನ್ನು ಭೇಟಿಯಾಗಲು ಅಥವಾ ಮಾತನಾಡಲು ಯಾರಿಗೂ ಅವಕಾಶವಿರಲಿಲ್ಲ. ಈ ಬಗ್ಗೆ ಕೇಳಿದಾಗ, ಯಾರಿಗೂ ಅವಕಾಶ ನೀಡದಂತೆ ನಿರ್ದೇಶಿಸಲಾಗಿದೆ ಎಂದು ಕಸ್ಟಮ್ಸ್ ಶುಕ್ರವಾರ ಹೈಕೋರ್ಟ್‍ಗೆ ತಿಳಿಸಿತ್ತು.
ಸ್ವಪ್ನಾಳನ್ನು ಮತ್ತೆ ಜೈಲಿಗೆ ಕರೆದೊಯ್ದ ಬಳಿಕ, ಪೋಕ್ಸೋ ಕೈದಿಗಳ ಸಹಿತ ಯಾರನ್ನೂ ಭೇಟಿಯಾಗಲು ಅನುಮತಿಸುವುದಿಲ್ಲ. ಇದು ಪ್ರಶ್ನಾರ್ಹವಾಗಿದೆ. ಜೈಲು ಅಧಿಕಾರಿಗಳು ಕೈದಿಗಳಿಗೆ ಕಿರುಕುಳ ನೀಡಿದ ಹಲವಾರು ಘಟನೆಗಳು ನಡೆದಿವೆ. ಆದರೆ ಈ ಬಗ್ಗೆ ಯಾವ ವಿಷಯಗಳೂ ಬಹಿರಂಗಗೊಳ್ಳುತ್ತಿಲ್ಲ. ಅರ್ಜಿಯು ನ್ಯಾಯಾಲಯದ ಉಲ್ಲೇಖಗಳನ್ನು ಪ್ರಶ್ನಿಸುತ್ತದೆ, ಆದರೆ ಸ್ವಪ್ನಾಳನ್ನು ರಕ್ಷಿಸುವ ಆದೇಶವಲ್ಲ ಎಂದು ಜೈಲಿನ ಅಧಿಕಾರಿಗಳು ಹೇಳುತ್ತಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕಸ್ಟಮ್ಸ್ ಹೇಳಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಹಲವಾರು ಉನ್ನತ ಅಧಿಕಾರಿಗಳು ಭಾಗಿಯಾಗಿರುವುದನ್ನು ಬಹಿರಂಗಪಡಿಸಿದ ಬಳಿಕ ಇದೀಗ ತಾನು ಜೈಲು ಬೆದರಿಕೆ ಎದುರಿಸುತ್ತಿದ್ದೇನೆ ಎಂದು ಸ್ವಪ್ನಾ ಸುರೇಶ್ ನ್ಯಾಯಾಲಯಕ್ಕೆ ತಿಳಿಸಿದ್ದಳು. ಎರ್ನಾಕುಳಂ ಸಿಜೆಎಂ ಜೈಲಿನಲ್ಲಿ ಭದ್ರತೆ ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿತ್ತು. ಕೆಲವು ಜನರಿಂದ ತನಗೆ ಬೆದರಿಕೆ ಇದೆ ಎಂದು ಸ್ವಪ್ನಾ ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಬಗ್ಗೆ ನ್ಯಾಯಾಲಯವು ಸಾಕಷ್ಟು ಭದ್ರತೆ ಒದಗಿಸುವಂತೆ ಆದೇಶಿಸಿತು.
ಏತನ್ಮಧ್ಯೆ, ನಿನ್ನೆ ಹೈಕೋರ್ಟ್‍ನಲ್ಲಿ ಕಸ್ಟಮ್ಸ್ ಹೈಕಮಿಷನರ್ ನೀಡಿದ ಅಫಿಡವಿಟ್‍ನಲ್ಲಿ, ಡಾಲರ್ ಕಳ್ಳಸಾಗಣೆಯಲ್ಲಿ ಸ್ಪೀಕರ್ ಪಿ ಶ್ರೀರಾಮಕೃಷ್ಣನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಮೂವರು ಕ್ಯಾಬಿನೆಟ್ ಮಂತ್ರಿಗಳು ಭಾಗಿಯಾಗಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರ ತಪೆÇ್ಪಪ್ಪಿಗೆಯ ಆಧಾರದ ಮೇಲೆ ಕಸ್ಟಮ್ಸ್ ಆಯುಕ್ತರು ಅಫಿಡವಿಟ್ ಸಲ್ಲಿಸಿದ್ದಾರೆ.


