ತಿರುವನಂತಪುರ: ರೈತ ಸಂಘಟನೆಗಳು ಶುಕ್ರವಾರ(ನಾಳೆ) ಕರೆ ನೀಡಿರುವ ಭಾರತ್ ಬಂದ್ ಕೇರಳದಲ್ಲಿ ಇರುವುದಿಲ್ಲ. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇರಳವನ್ನು ಹೊರಗಿಡಲಾಗುತ್ತಿದೆ. ರಾಜ್ಯದಲ್ಲಿ ವಿಶೇಷ ಸಂದರ್ಭದ ಕಾರಣ ಭಾರತ್ ಬಂದ್ ಇಲ್ಲಿ ನಡೆಸಲಾಗುವುದಿಲ್ಲ ಎಂದು ಕೇರಳ ಕರ್ಷಕ ಸಂಘ ರಾಜ್ಯ ಅಧ್ಯಕ್ಷ ಕೆ.ಕೆ. ರಾಗೇಶ್ ಎಂ.ಪಿ ಹೇಳಿರುವರು.
ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ರೈತ ಸಂಘಟನೆಗಳು ನಾಳೆ ಭಾರತ್ ಬಂದ್‍ಗೆ ಕರೆ ನೀಡಿವೆ. ಕೇಂದ್ರದ ರೈತ ವಿರೋಧಿ ನೀತಿಗಳ ವಿರುದ್ಧ ನಾಳೆ ಸಂಜೆ ಬೂತ್ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ.



