HEALTH TIPS

ಗಡಿನಾಡಿನ ಈಗಿನ ಧ್ವನಿಗೆ ನೆಲೆಯೊದಗೀತೇ

          ಗಡಿನಾಡು ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕøತಿಯ ರಕ್ಷಣೆ, ಸಾಂವಿಧಾನಿಕ ಹಕ್ಕು ಈ ಮೊದಲಾದ ಕೂಗು ಇಂದು ನಿನ್ನೆಯದಲ್ಲ. ಬಹುಷಃ ಭಾಷಾವಾರು ಪ್ರಾಂತ್ಯ ವಿಭಜನೆಗೊಂಡಂದಿನಿಂದ ಈ ಬಗ್ಗೆ ಅಲೆಯೆದ್ದಿರಬೇಕು. ಅಂದಿನಿಂದ ಇಂದಿನವರೆಗೂ ನಿರಂತರ ಹೋರಾಟ, ಪ್ರತಿಭಟನೆ ನಡೆಯುತ್ತಲೇ ಬಂದಿದೆ. ಆದರೆ ಕನ್ನಡಿಗರ ಅಂತಸತ್ವದ ಪ್ರತೀಕವಾದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಬಹಳ ತಡವಾಗಿ ಕಾಸರಗೋಡಲ್ಲಿ ಅಸ್ತಿತ್ವಕ್ಕೆ ಬಂದಿರುವಂತದ್ದೆಂಬುದು ಇಲ್ಲಿ ಉಲ್ಲೇಖಾರ್ಹ!


       ಹಿರಿಯ ನಾಯಕರ ನೇತೃತ್ವದಲ್ಲಿ ಗಡಿನಾಡಿನ ಕನ್ನಡ ಅಸ್ಮಿತೆಗೆ ಬಹಳಷ್ಟು ಕಾಣ್ಕೆ ನೀಡಿದ್ದ ಕೇರಖಳ ಘಟಕ ಇತ್ತೀಚೆಗಿನ ವರ್ಷದಲ್ಲಿ ತನ್ನ ಧ್ವನಿಯನ್ನು ಕಳಕೊಂಡಿರುವುದು ಒಪ್ಪಬೇಕಾದ ಸತ್ಯವೂ ಹೌದು. ಕೇವಲ ವಾರ್ಷಿಕ ಸಮ್ಮೇಳನ, ಒಂದೆರಡು ದತ್ತಿನಿಧಿ ಕಾರ್ಯಕ್ರಮಗಳನ್ನು ಮಾಡಿದಷ್ಟಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕತೃತ್ವತೆ ಮುಗಿದಂತೆ ಎಂಬಲ್ಲಿಗೆ ಇಂದಿನ ಸ್ಥಿತಿ ಆಶ್ಚರ್ಯ ಚಕಿತಗೊಳಿಸುತ್ತದೆ.

        ಕಸಾಪ ಕಾಸರಗೋಡು ಘಟಕದಲ್ಲಿ ಸುಮಾರು 530 ರಷ್ಟು ಸದಸ್ಯರು ಮಾತ್ರ ಸದಸ್ಯತನ ಪಡೆದಿರುವರು ಎಂಬುದೇ ಚೋದ್ಯ ಮೂಡಿಸುತ್ತದೆ. ಮಿಕ್ಕೆಲ್ಲ ಕನ್ನಡಿಗರನ್ನು ಹೊರತಾಗಿಸಿದರೂ ಇಲ್ಲಿಯ ಕನ್ನಡ ಅಧ್ಯಾಪಕರು 1500 ರಷ್ಟಿರಬೇಕು. ಅವರೆಲ್ಲರಿಗೂ ಸದಸ್ಯತನ ಈವರೆಗೆ ಲಭ್ಯವಾಗಿಲ್ಲ ಎಂದಾದರೆ ಈ ಘಟಕದ ಲಕ್ಷ್ಯದ ಬಗ್ಗೆ ಸಂಶಯವೂ ಮೂಡದಿರದು. 

     ಇದೀಗ ಮತ್ತೆ ಸಾಹಿತ್ಯ ಪರಿಷತ್ತಿಗೆ ಚುನಾವಣೆ ಘೋಷಣೆಯಾಗಿದೆ. ನಾಮಪತ್ರ ಸಲ್ಲಿಕೆ ಆರಂಭವೂ ಆಗಿದೆ. ವಿಶೇಷವೆಂದರೆ ಕಳೆದ ಮೂರು ಅವಧಿಯಲ್ಲಿ ಅಧ್ಯಕ್ಷರಾಗಿರುವ ಎಸ್.ವಿ.ಭಟ್ ಮತ್ತೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಹಾಗಿದ್ದರೆ ಬೇರೊಂದು ಹೊಸ ಮುಖ ಗಡಿನಾಡಲ್ಲಿ ಇಲ್ಲವಾಯಿತೇ ಎಂಬ ಬಗ್ಗೆ ಸಾಮಾನ್ಯ ಕನ್ನಡಿಗನಿಗೆ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಸಾಹಿತ್ಯ ಪರಿಷತ್ತಿನ ವಾಡಿಕೆಯ ಕಾರ್ಯಕ್ರಮಗಳನ್ನು ಚಾಚೂ ತಪ್ಪದೆ, ವ್ಯವಸ್ಥಿತವಾಗಿ ಮಾಡುತ್ತಿರುವ ಎಸ್.ವಿ.ಭಟ್ ಅವರ ಕಾರ್ಯಕ್ಷಮತೆ ಸ್ತುತ್ಯರ್ಹವಾದರೂ ಸಾಮಾಜಿಕವಾಗಿ, ಕನ್ನಡ ಸಮುದಾಯದ ಸಾಮುದಾನಿಕ ಧ್ವನಿಯಾಗಿ ಅವರಿಂದ ಮೂಡಿಬರಲು ಸಾಧ್ಯವೇ ಆಗಿಲ್ಲ ಎಂಬುದೂ ನಿರ್ವಿವಾದ. ಇತ್ತೀಚಿನ ವರ್ಷದಲ್ಲಿ ಪೆಡಂಭೂತದಂತೆ ಕಾಡುತ್ತಿರುವ ಕನ್ನಡ ಮಾಧ್ಯಮ ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಬಾರದವರಿಗೆ ಕೇರಳ ಸರ್ಕಾರ ನೀಡಿದ ಪರಿಗಣನೆ, ಆಬಳಿಕದ ಹೋರಾಟಗಳಲ್ಲಿ ಕಸಾಪ ನೇರವಾಗಿ, ಗಟ್ಟಿ ಧ್ವನಿಯಾಗಿ ನೇತೃತ್ವ ವಹಿಸುವಲ್ಲಿ ಸಂಪೂರ್ಣ ಸೋತಿರುವುದು ಖಂಡಿತಾ ಹೌದು. ಹಾಗೊಂದು ಸಾಧ್ಯತೆಗೆ ಮುಂದಾಗಿದ್ದರೆ ಕಸಾಪ ಕೇಂದ್ರ ಕಾರ್ಯಾಲಯದ ಮೂಲಕ ಕರ್ನಾಟಕ ಮತ್ತು ಕೇರಳ ಸರ್ಕಾರದ ಕಿವಿಹಿಂಡುವ ಸಾಮಥ್ರ್ಯ, ಸಾಧ್ಯತೆಗಳು ಕಸಾಪಕ್ಕೆ ಇದ್ದೇ ಇತ್ತು. ಇಂತಹ ಹಲವು ಉದಾಹರಣೆಗಳ ಸರಣಿಯಲ್ಲಿ ಕಸಾಪ ನಿತ್ರಾಣಗೊಂಡಿರುವುದರಿಂದ ಗಡಿನಾಡ ಘಟಕಕ್ಕೆ ಕಾಯಕಲ್ಪ ಖಂಡಿತಾ ಬೇಕು.

      ಇಲ್ಲಿಯ ಕನ್ನಡ ಪ್ರೇಮಿಗಳು ಇದೀಗ ಅಂತಹದೊಂದು ಚಮತ್ಕಾರಕ್ಕಿಳಿಯಲು ಸಿದ್ದರಾಗಿರುವ ಬಗ್ಗೆ ವರ್ತಮಾನಗಳು ಕೇಳಿಬಂದಿವೆ. ಮುಂಬರುವ ಆಯ್ಕೆ ಪ್ರಕ್ರಿಯೆಯಲ್ಲಿ ಹೊಸ, ಉತ್ಸಾಹಿ ಮುಖಂಡನೋರ್ವನ ಆಯ್ಕೆಗೆ ಪ್ರಯತ್ನಗಳು ನಡೆಯಬೇಕು. ಹಾಗಿದ್ದಲ್ಲಿ ಕಸಾಪದಂತಹ ಉನ್ನತ ಮೌಲ್ಯಯುತ ಸಂಸ್ಥೆ ಕಾಸರಗೋಡಿನಲ್ಲಿದ್ದುದಕ್ಕೆ ಸಾರ್ಥಕತೆ ಮೂಡುತ್ತದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries