ಉಪ್ಪಳ: ನಿರಂತರ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಲಯನ್ಸ್ ಕ್ಲಬ್ ಉಪ್ಪಳ-ಮಂಜೇಶ್ವರ ನಿರ್ಮಿಸಿದ ನೂತನ ಮನೆಯ ಕೀಲಿಕೈ ಹಸ್ತಾಂತರ ಶುಕ್ರವಾರ ಸಂಜೆ ಕಬಣೂರಲ್ಲಿ ನಡೆಯಿತು.
ಕಬಣೂರು ಶಾಲಾ ಪರಿಸರದಲ್ಲಿ ನಾರಾಯಣ ಎಂಬವರಿಗೆ ಉಚಿತ ಮನೆಯನ್ನು ಹಸ್ತಾಂತರಿಸಲಾಯಿತು. ಕುಟುಂಬದ ಜೊತೆ ಗುಡಿಸಲಲ್ಲಿ ವಾಸಿಸುತ್ತಿದ್ದ ಇವರ ಸಂಕಷ್ಟದ ಬಗ್ಗೆ ತಿಳಿದ ಮಂಗಲ್ಪಾಡಿ ಗ್ರಾ.ಪಂ. ಮಾಜಿ ಸದಸ್ಯೆ ಜಯಶರ್ಮಿಳ ಅವರು ಲಯನ್ಸ್ ಕ್ಲಬ್ ಪದಾಧಿಕಾರಿಗಳ ಗಮನಕ್ಕೆ ತಂದಿದ್ದರು. ಕ್ಲಬ್ ಸದಸ್ಯರು ಮುತುವರ್ಜಿಯಿಂದ ನೂತನ ಮನೆ ನಿರ್ಮಿಸಿ ಹಸ್ತಾಂತರಿಸಿದ್ದಾರೆ.
ಲಯನ್ಸ್ ಕ್ಲಬ್ ಸ್ಟೇಟ್ ಗವರ್ನರ್ ಒ.ವಿ.ಸನಲ್ ಕೀಲಿಕೈಯನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಲಯನ್ಸ್ ವಲಯ ಅಧ್ಯಕ್ಷ ಎಂ.ಜೆ.ಎಫ್.ವಿ.ವೇಣುಗೋಪಾಲನ್, ಪ್ರಶಾಂತ್ ಜಿ.ನಾಯರ್, ಲಯನ್ಸ್ ಕ್ಲಬ್ ಅಧ್ಯಕ್ಷ ಗಣೇಶ್ ಎಂ., ಕಾರ್ಯದರ್ಶಿ ಕಮಲಾಕ್ಷ ಪಂಜ, ಕೋಶಾಧಿಕಾರಿ ಚರಣ್, ಸದಸ್ಯರಾದ ಶೃಂಗಾರ್ ವಿಜಯನ್, ಪ್ರವೀಣ ಪಕಳ, ಎಂ.ಅಶೋಕ್, ಧೀರಜ್, ಎಂಜಿ.ಎಫ್.ಲಕ್ಷ್ಮಣ್ ಕುಂಬಳೆ, ಗಿರೀಶ್ ಪೊದುವಾಳ್, ವಿಜಯ ರೈ ಪರಂಕಿಲ, ಬಾಲಕೃಷ್ಣ ಶೆಟ್ಟಿ, ರಾಮಚಂದ್ರ ಬಲ್ಲಾಳ್, ಹರಿನಾಥ ಭಂಡಾರಿ, ಸತೀಶ್ ಮಾಸ್ತರ್, ಬಾಬು ಎಂ.ಉಪಸ್ಥಿತರಿದ್ದರು.





