ಮಂಜೇಶ್ವರ: ಬದುಕು ಸ್ಪರ್ಧೆಯಲ್ಲ, ಯವ್ವನದ ಸಮಯದಲ್ಲಿ ಒಳ್ಳೆಯ ಸಂಸ್ಕಾರ ಸಿಕ್ಕಿದಾಗ ಸುಭದ್ರ ದೇಶ ಕಟ್ಟಲು ಸಾಧ್ಯ. ಉತ್ತಮ ಸಂಸ್ಕಾರದಿಂದ ಉತ್ತಮ ವ್ಯಕಿತ್ವ ನಿರ್ಮಾಣ ಸಾಧ್ಯ. ಭಜನೆಯಿಂದ ಪ್ರೀತಿಭಾವ ಮೂಡಿ ಬರಲು ಸಾಧ್ಯ. ಕ್ಷಣಕ್ಷಣದಲ್ಲಿ ಶಿಕ್ಷಣವನ್ನು ನೀಡಿದಾಗ ಸಮಾಜ ಉತ್ತಮವಾಗಿ ಮೂಡಿ ಬರಲು ಸಾಧ್ಯ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರು ತಿಳಿಸಿದರು.
ತಲೇಕಳ ತರವಾಡಿನಲ್ಲಿ ಆಯೋಜಿಸಿದ ಒಡಿಯೂರು ಶ್ರೀಗಳವರ ಷಷ್ಟ್ಯಬ್ದ ಸಂಭ್ರಮದ ಭಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.
ಸಾಧ್ವಿ ಮಾತಾನಂದಮಯೀಯವರು ಈ ಸಂದರ್ಭ ಸಾಮೂಹಿಕ ಹನುಮಾನ್ ಚಾಲೀಸವನ್ನು ಪಠಿಸಿ ಹನುಮಾನ್ ಚಾಲೀಸ ಮನವನ್ನು ಬೆಳಗುವುದು, ಮಾತ್ರವಲ್ಲ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು. ಮನೆ ಮನಸ್ಸುಗಳು ಒಂದಾದಾಗ ಉತ್ತಮ ಭಾವನೆಗಳು ಮೂಡಿಬರಲು ಸಾಧ್ಯ ಎಂದು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಕೆ ಶೆಟ್ಟಿ ಕಡಂಬಾರು, ಹಿರಿಯ ಕೃಷಿಕ ಮಾರಪ್ಪ ಭಂಡಾರಿ ಕೌಡೂರು ಬೀಡು, ಕಾರ್ಮಿಕ ತನಿಯಪ್ಪ ಶೆಟ್ಟಿಗಾರ್, ಭಜಕರಾದ ಸದಾಶಿವ ಮಡಿವಾಳ, ಹನುಮಾನ್ ಚಾಲೀಸದ ನಿತ್ಯ ಪಠಣಕಾರರಾದ ಪ್ರೇರಣಾ ರೈ, ಶಿಕ್ಷಣ ಸೇವಕ ಶ್ರೀಧರ ರಾವ್ ಆರ್.ಎಂ. ಉಪಸ್ಥಿತರಿದ್ದರು.
ಕಳೆದ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಮಿಥಿಲಾ ಶೆಟ್ಟಿ, ರಸಪ್ರಶ್ನೆ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ಸಂಭ್ರಮ ಭಂಡಾರಿ ಇವರವನ್ನು ಸನ್ಮಾನಿಸಲಾಯಿತು. ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತಡ್ಕ ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಶ್ರೀಗಳವರ ಷಷ್ಟ್ಯಬ್ದ ಸಂಭ್ರಮ ಕೇಂದ್ರ ಸಮಿತಿ ಕೋಶಾಧಿಕಾರಿ ಸುರೇಶ್ ರೈ ಒಡಿಯೂರು, ಶ್ರೀಗಳವರ ಷಷ್ಟ್ಯಬ್ದ ಸಂಭ್ರಮ ಮೀಂಜ ಸಮಿತಿ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ವಲಯ ಉಪಾಧ್ಯಕ್ಷ ಸತೀಶ್ ಅಡಪ ಸಂಕಬೈಲು ಉಪಸ್ಥಿತರಿದ್ದರು. ಮಹಾಲಿಂಗೇಶ್ವರ ಕುಣಿತ ಭಜನಾ ಮಂಡಳಿ ನೇತೃತದ್ವಲ್ಲಿ ಮದಂಗಲ್ಲು ಶ್ರೀ ಮಹಾಗಣಪತಿ ಭಜನಾ ಮಂಡಳಿ ಹಾಗೂ ಕಡಂಬಾರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ಜರಗಿತು. ತಲೇಕಳ ತರವಾಡಿನ ರವಿಶಂಕರ್ ಶೆಟ್ಟಿ ಸ್ವಾಗತಿಸಿ, ಸದಾನಂದ ಶೆಟ್ಟಿ ತಲೇಕಳ ಕಾರ್ಯಕ್ರಮ ನಿರೂಪಿಸಿದರು. ಪುಷ್ಪರಾಜ್ ಶೆಟ್ಟಿ ತಲೇಕಳ ಸನ್ಮಾನಿತರನ್ನು ಪರಿಚಯಿಸಿದರು. ಸುಬ್ಬಣ್ಣ ಭಂಡಾರಿ ತಲೇಕಳೆ ವಂದಿಸಿದರು.





