ಕಾಸರಗೋಡು: ಕೇರಳ ಜಲ ಪ್ರಾಧಿಕಾರದ ಕಾಸರಗೋಡು ಶುದ್ಧ ನೀರು ಪೂರೈಕೆ ಯೋಜನೆಯ ಪ್ರಧಾನ ನಳ್ಳಿ ಲೈನ್ ಆಗಿರುವ ಕಾಸರಗೋಡು ನೂತನ ಬಸ್ ನಿಲ್ದಾಣ ಬಳಿಯಿಂದ ಹಳೆ ಬಸ್ ನಿಲ್ದಾಣ
ವರೆಗಿನ ಪ್ರದೇಶದಲ್ಲಿ ಪೈಪ್ ಲೈನ್ ಬದಲಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಮಾ.29ರಿಂದ 31 ವರೆಗೆ ನಳ್ಳಿ ನೀರು ವಿತರಣೆ ಮೊಟಕುಗೊಳ್ಳಲಿದೆ. ಈ ನಿಟ್ಟಿನಲ್ಲಿ ತಾಯಲಂಗಾಡಿ, ತೆರುವತ್, ತಳಂಗರೆ, ಹೊನ್ನೆಮೂಲೆ, ಅಡ್ಕತ್ತಬೈಲು, ನೆಲ್ಲಿಕುಂಜೆ, ಬೀರಂತ ಬೈಲು, ನೆಲ್ಲಿಕುಂಜೆ ಕರಾವಳಿ, ಬಂಗರಕುನ್ನು ಪ್ರದೇಶಗಳಲ್ಲಿ ನೀರು ಸರಬರಾಜು ಮೊಟಕುಗೊಳ್ಳಲಿದೆ ಎಂದು ಸಹಾಯಕ ಕಾರ್ಯಕಾರಿ ಇಂಜಿನಿಯರ್ ತಿಳಿಸಿದರು.






