ಮಂಜೇಶ್ವರ: ಕೇರಳ ಸರ್ಕಾರದ ಅನಾಸ್ತೆಯಿಂದ ಕೇರಳದ ಜನತೆಗೆ ಇಲ್ಲವಾಗಿರುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆ 5 ಲಕ್ಷ ರೂ ಗಳ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ ಕೆರಳದಲ್ಲಿಯೂ ಜಾರಿಗೆ ತರಲಾಗುವುದು. ಪ್ರತಿ ಕುಟುಂಬಗಳಿಗೂ ಈ ನೆರವು ತಲಪಿಸಲಾಗುವುದು. ಹಾಗೂ ಕೃಷಿ ಸನ್ಮಾನ್ ಯೋಜನೆ ಮಂಜೇಶ್ವರದ ಪ್ರತಿ ಕುಟುಂಬಗಳಿಗೂ ಲಭ್ಯವಾಗುವಂತೆ ಮಾಡಲಾಗುವುದು ಎಂದು ಬಿಜೆಪಿ ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿ ಕೆ. ಸುರೇಂದ್ರನ್ ಹೇಳಿದರು.
ಮಂಜೇಶ್ವರ ಪಂಚಾಯತಿ ಪರ್ಯಟನೆಯಲ್ಲಿ ಅವರು ಮಾತನಾಡಿದರು.
ಆದರ್ಶ್ ಬಿಎಂ, ರಾಜೇಶ್ ತೂಮಿನಾಡ್, ಯಾದವ ಬಡಾಜೆ, ಪದ್ಮನಾಭ ಕಡಪ್ಪರ, ಬಾಬು ಮಾಸ್ತರ್, ಅವಿನಾಶ್ ಹೆಗ್ಡೆ, ರಾಜೇಶ್ ಮಜಲ್, ನಿಷ ಭಟ್, ಸುಪ್ರಿಯಾ ಶೆಣೈ ಉಪಸ್ಥಿತರಿದ್ದರು. ವಿವಿಧ ಪಕ್ಷಗಳಿಂದ ಬಿಜೆಪಿ ಸೇರ್ಪಡೆಯದವರನ್ನು ಸ್ವಾಗತಿಸಲಾಯಿತು. ಸಂತೋಷ್ ಅಡ್ಕ ಸ್ವಾಗತಿಸಿ,ಲಕ್ಷ್ಮಣ್ ವಂದಿಸಿದರು.





