ಉಪ್ಪಳ: ಬೈಲಬಾಕುಡ ಹೆಲ್ಪ್ ಗ್ರೂಪ್‍ನ ಹನ್ನೊಂದನೇ ಯೋಜನೆ ಧನಸಹಾಯವನ್ನು ಪ್ರತಾಪನಗರದ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಎಳೆಯ ಮಗುವಿನ ಚಿಕಿತ್ಸೆಗಾಗಿ ನೀಡಲಾಯಿತು. ಪ್ರತಾಪನಗರ ನಿವಾಸಿ ಶರತ್-ಪ್ರಮಿಳಾ ದಂಪತಿ ಪುತ್ರ, 40ದಿವಸ ಹರೆಯದ ಚಾರ್ವಿಕ್ ಎಂಬ ಮಗುವಿನ ಹೃದಯಸಂಬಂಧಿಕಾಯಿಲೆಯ ಚಿಕಿತ್ಸೆಗಾಗಿ ವಿನಿಯೋಗವಾಗಲಿದೆ. ಇದೇ ಸಂದರ್ಭ ಬೈಲಬಾಕುಡ ಕ್ರಿಕೆಟರ್ಸ್ ವತಿಯಿಂದ ಸಂಗ್ರಹಿಸಲಾದ ಧನಸಹಾಯವನ್ನೂ ವಿತರಿಸಲಾಯಿತು.
ಬೈಲಬಾಕುಡ ಕೇಂದ್ರ ಸಮಿತಿ ಅಧ್ಯಕ್ಷೆ ಸುಜಾತಾಶಿವ ಬಳ್ಳಿಮೊಗರು, ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಮಂಗಲ್ಪಾಡಿ, ಕೋಶಾಧಿಕಾರಿ ರಘುರಾಮ, ಛತ್ರಪಳ್ಳ, ಹೆಲ್ಪ್‍ಗ್ರೂಪ್ ಪ್ರಮುಖರಾದ ಜಯಪ್ರಕಾಶ್ ಮಂಜೇಶ್ವರ, ಶರತ್ ಅರಿಮಲೆ, ಅಂಕಿತ್ ಬೇಕೂರು, ಶ್ರೀನಿವಾಸ್ ಕರಿಬೈಲು, ಪ್ರಮುಖರಾದ ವಿಜಯ್ ಪಂಡಿತ್ ಉಪ್ಪಳ, ಶಿವ ಬಳ್ಳಿಮೊಗರು, ತುಳಸೀದಾಸ್ ಮಂಜೇಶ್ವರ, ಪ್ರವೀಣ್ ಮಂಗಳೂರು, ಚಂದ್ರಹಾಸ ಕತ್ತರಿಕೋಡಿ, ಸುರೇಶ್ ಮಂಜೇಶ್ವರ, ರಾಮ ಮಂಗಲ್ಪಾಡಿ, ಹರೀಶ್ ಬಿ.ಎಂ, ಉದಯ ಸೋಂಕಾಲ್, ಮುರುಗೇಶ್ ಪಚ್ಲಂಪಾರೆ, ಅಮಿತಾ ಸೋಂಕಾಲ್ ಉಪಸ್ಥಿತರಿದ್ದರು.





