ಕಾಸರಗೋಡು: ನಗರದ ನ್ಯಾಯಾಲಯ ವಠಾರದಲ್ಲಿ ಅಸೌಖ್ಯದಿಂದ ಕುಸಿದುಬಿದ್ದಿದ್ದ ಮಹಿಳೆಯನ್ನು ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ, ನ್ಯಾಯವಾದಿ ಕೆ.ಶ್ರೀಕಾಂತ್ ನೇತೃತ್ವದಲ್ಲಿ ಉಪಚರಿಸಿ ಕಳುಹಿಸಿಕೊಟ್ಟ ಘಟನೆ ನಿನ್ನೆ ನಡೆದಿದೆ.
ನ್ಯಾಯಾಲಯದಿಂದ ತಮ್ಮ ವಾಹನದಲ್ಲಿ ಶ್ರೀಕಾಂತ್ ಆಗಮಿಸುತ್ತಿದ್ದ ಸಂದರ್ಭ ಮಹಿಳೆ ರಸ್ತೆಬದಿ ಕುಸಿದು ಬಿದ್ದಿದ್ದರು. ತಕ್ಷಣ ಮಹಿಳೆಯನ್ನು ತನ್ನ ಕಾರಿನಲ್ಲಿ ಹತ್ತಿಸಿ, ಪ್ರಥಮ ಚಿಕಿತ್ಸೆ ಕೊಡಿಸಿ, ಸನಿಹದ ಹೋಟೆಲ್‍ನಲ್ಲಿ ಆಹಾರ ನೀಡಿದ ನಂತರ ಪ್ರಯಾಣ ಮುಂದುವರಿಸಿದ್ದಾರೆ. ಕುಸಿದುಬೀಳುವ ಸಂದರ್ಭ ಮಹಿಳೆ ಹಣೆಗೆ ಸಣ್ಣಪುಟ್ಟ ಗಾಯವುಂಟಾಗಿತ್ತು.


