ಕಾಸರಗೋಡು: ಬೇಕಲ ಸಮುದ್ರದಲ್ಲಿ ದೋಣಿಯೊಂದು ಬಹುತೇಕ ಮುಳುಗಡೆಗೊಂಡು ಅದರಲ್ಲಿದ್ದ ಐವರು ಸಿಲುಕಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಬೇಕಲ ಕೀಯೂರ್ ಕರಾವಳಿಯ ಎಂಟು ನಾಟಿಕಲ್ ಮೈಲಿ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ದೋಣಿ ಎರಡು ಭಾಗಗಳಾಗಿ ಮುರಿದು ಬಹುತೇಕ ಮುಳುಗಡೆಗೊಂಡಿದೆ ಮತ್ತು ಐವರು ಕಾರ್ಮಿಕರು ನೀರಿನಲ್ಲಿ ತೇಲುತ್ತಿರುವ ದೋಣಿಯ ಒಂದು ಬದಿಯಲ್ಲಿ ಸಿಕ್ಕಿಬಿದ್ದಿದ್ದರು. ದೋಣಿಯಲ್ಲಿದ್ದ ತಿರುವನಂತಪುರ ನಿವಾಸಿಗಳು ಬಳಿಕ ತಮ್ಮಲ್ಲಿದ್ದ ತುರ್ತು ಕರೆ ವ್ಯವಸ್ಥೆಯ ಮೂಲಕ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿದ್ದು, ಧಾವಿಸಿದ ತಟ ರಕ್ಷಣಾ ಪಡೆ ಹಾಗೂ ಪೋಲೀಸರು 10.30ರ ವೇಳೆಗೆ ರಕ್ಷಿಸಿದರು ಎಂದು ವರದಿಯಾಗಿದೆ.





