ಕಾಸರಗೋಡು: ವಿಧಾನಸಭೆ ಚುನಾವಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ನಿಷ್ಪಕ್ಷಪಾತ, ಸುಧಾರಿತ ಚುನಾವಣೆ ನಡೆಯಲು ರಾಜಕೀಯ ಪಕ್ಷಗಳ ಬೆಂಬಲ ಘೋಷಿಸಿವೆ.
ಬುಧವಾರ ಜಿಲ್ಲಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಈ ಅಭಿಮತ ವ್ಯಕ್ತವಾಗಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಚುನಾವಣೆ ಪೂರ್ವಭಾವಿಯಾಗಿ ನಡೆಸಿರುವ ಸಜ್ಜೀಕರಣಗಳ, ಕಾನೂನುಪಾಲನೆ, ಕೈಗೊಳ್ಳಬೇಕಾದ ಜಾಗರೂಕತೆಗಳ ಕುರಿತು ಮಾಹಿತಿ ನೀಡಿದರು. ಈ ಹಿಂದಿನ ಚುನಾವಣೆಗಳಲ್ಲಿ ನೀಡಿರುವ ಮಾದರಿ ರೂಪದ ಬೆಂಬಲ ಈ ಬಾರಿಯ ಚುನಾವಣೆಯಲ್ಲೂ ನೀಡುವಂತೆ ಅವರು ವಿನಂತಿಸಿದರು.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸಿ.ಎಚ್.ಕುಂಞಂಬು, ಕೆ.ಆರ್.ಜಯಾನಂದ, ನ್ಯಾಯವಾದಿ ಗೋವಿಂದನ್ ಪಳ್ಳಿಕ್ಕಾಪಿಲ್, ಎಂ.ಕುಂಞಂಬು ನಂಬ್ಯಾರ್, ಮಾನುವೆಲ್ ಮೇಲತ್, ಮೂಸಾ ಬಿ. ಚೆರ್ಕಳ, ನ್ಯಾಷನಲ್ ಅಬ್ದುಲ್ಲ, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಸಾಮುವೆಲ್ ಫೆನಾರ್ಂಡಿಸ್, ಹೆಚ್ಚುವರಿ ದಂಡನಧಿಕಾರಿ ಅತುಲ್ ಎಸ್.ನಾಥ್, ಹಣಕಾಸು ಅಧಿಕಾರಿ ಕೆ.ಸತೀಶನ್ ಉಪಸ್ಥಿತರಿದ್ದರು.





