ಉಪ್ಪಳ: ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ಷಷ್ಟ್ಯಬ್ದ ಸಂಭ್ರಮದ ಜ್ಞಾನವಾಹಿನಿ ಸಮಿತಿ ಮೀಂಜ ಘಟಕದ ನೇತೃತ್ವದಲ್ಲಿ 'ಹನುಮಾನ್ ಚಾಲೀಸಾ ಅಭಿಯಾನ' ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡು ಮಂಗಳವಾರ ಸಂತಡ್ಕ ನಾರಾಯಣ ಕೆ ಯವರ ಮನೆಯಿಂದ ಮನೆ ಮನೆ ಹನುಮಾನ್ ಚಾಲೀಸಾ ಅಭಿಯಾನ ನಡೆಯಿತು.
ಕ್ಯಾಂಪೆÇ್ಕೀ ನಿರ್ದೇಶಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಅವರು ಮನೆಯವರಿಗೆ ಹನುಮಾನ್ ಚಾಲೀಸಾ ಪುಸ್ತಕ ವನ್ನು ನೀಡಿ ಚಾಲನೆಯನ್ನಿತ್ತರು. ಬಳಿಕ ವಿವಿಧ ಮನೆಗಳಲ್ಲಿ ಹನುಮಾನ್ ಚಾಲೀಸಾ ಪಠಣ ನಡೆಯಿತು.






