ಪೆರ್ಲ:ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದ ಸಂಭ್ರಮದ ಅಂಗವಾಗಿ ಷಷ್ಠ್ಯಬ್ದ ಸಂಭ್ರಮ ಸಮಿತಿ ಕಾಟುಕುಕ್ಕೆ ಘಟಕದ ನೇತೃತ್ವದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ಎ.25ರಂದು ಬೆಳಗ್ಗೆ 8ರಿಂದ ತುಳು ಜನಪದವನ್ನು ಪರಿಚಯಿಸುವ ನಿಟ್ಟಿನಲ್ಲಿ 'ತುಳು ಜನಪದ ವೈಭವ' ವಿಶೇಷ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 8ಕ್ಕೆ ದೇವಳದ ಪ್ರಧಾನ ಅರ್ಚಕ ಮಧುಸೂದನ ಪುಣಿಂಚಿತ್ತಾಯ ದೀಪ ಪ್ರಜ್ವಲಿಸಲಿದ್ದಾರೆ.ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಮತ್ತು ಶಿಷ್ಯಂದಿರು ಧನ್ವಂತರಿ ಸ್ತ್ರೊತ್ರ ಪಠಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.9ರಿಂದ ಖ್ಯಾತ ವೈದ್ಯ ಡಾ.ಶ್ರೀಕೃಷ್ಣ ಪೈಸಾರಿ ಕಾಟುಕುಕ್ಕೆ ಔಷಧೀಯ ಸಸ್ಯಗಳ ಪ್ರದರ್ಶನ, ಬಾಲಕೃಷ್ಣ ಬಲ್ಯಾಯ ಕೆ. ಪಟ್ಲ ತುಳುನಾಡಿನ ಪ್ರಾಚೀನ ಪರಿಕರಗಳ ಪ್ರದರ್ಶನ ಹಾಗೂ ಎಸ್.ಎಸ್.ಎಚ್.ಎಸ್.ಎಸ್.ಕಾಟುಕುಕ್ಕೆ ಪ್ರಿನ್ಸಿಪಾಲ್ ಪದ್ಮನಾಭ ಶೆಟ್ಟಿ, ಪಿಎಸ್ ಸಿ ಉದ್ಯೋಗ ಮಾರ್ಗದರ್ಶನ, ನೋಂದಣಿಗೆ ಚಾಲನೆ ನೀಡುವರು.ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಜೆ.ಪಿ.ಎಚ್.ಎನ್.ಶ್ರೀಜಾ ಎಂ., ಶ್ರೀ ಸುಬ್ರಹ್ಮಣೇಶ್ವರ ಮಹಿಳಾ ಮಂಡಳಿ ಕಾಟುಕುಕ್ಕೆ ಆಯೋಜಿಸುವ ಗ್ರಾಮೀಣ ಕ್ರೀಡೋತ್ಸವಕ್ಕೆ ಚಾಲನೆ ನೀಡುವರು.
ಮಧ್ಯಾಹ್ನ 1.30ರಿಂದ 'ಪುಲಮರ್ದ್ ಪರಿಪು-ಪೆÇೀಪು' ಕಾಸರಗೋಡಿನ ಪ್ರಸಿದ್ಧ ನಾಟಿವೈದ್ಯರುಗಳಿಂದ ಸಂವಾದ ನಡೆಯಲಿದೆ.ಸಂಜೆ 3.30ರಿಂದ ಕಾಟುಕುಕ್ಕೆ ಶ್ರೀ ಕ್ಷೇತ್ರಕ್ಕೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಶ್ರೀ ಮಾತಾನಂದಮಯಿ ಅವರ ಆಗಮನ, ಶ್ರೀ ಸುಬ್ರಹ್ಮಣೇಶ್ವರ ಮಹಿಳಾ ಮಂಡಳಿಯ ಸದಸ್ಯರು ಮತ್ತು ಕಾಟುಕುಕ್ಕೆಯ ಪುಟಾಣಿಗಳಿಂದ ಪೂರ್ಣಕುಂಭ ಸ್ವಾಗತ, ಸಂಜೆ 4ಕ್ಕೆ ಆರಂಭವಾಗುವ ಸಮಾರೋಪ ಸಮಾರಂಭವನ್ನು ಸಾಧ್ವಿ ಶ್ರೀ ಮಾತಾನಂದಮಯಿ ಉದ್ಘಾಟಿಸಿ ಶ್ರೀ ಹನುಮಾನ್ ಚಾಲೀಸಾ ಪಠನ ನಡೆಸಲಿದ್ದಾರೆ.ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು.ಷಷ್ಟಬ್ಬ ಸಂಭ್ರಮ ಸಮಿತಿ ಗೌರವಾಧ್ಯಕ್ಷ, ಕಾಟುಕುಕ್ಕೆ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣನ್ ಕಾಟುಕುಕ್ಕೆ ಅಧ್ಯಕ್ಷತೆ ವಹಿಸುವರು.ರಾಜಶ್ರೀ ಟಿ. ರೈ ಪೆರ್ಲ ಅವರ 'ಕಲ್ಪತರು ಕೃತಿಯನ್ನು ಒಡಿಯೂರು ಶ್ರೀಗಳು ಬಿಡುಗಡೆ ಗೊಳಿಸಲಿದ್ದಾರೆ.ಎಸ್.ಎಸ್.ಎಚ್.ಎಸ್.ಎಸ್. ಕಾಟುಕುಕ್ಕೆ ಉಪನ್ಯಾಸಕಿ ವಾಣಿ ಜಿ. ಶೆಟ್ಟಿ ಕೃತಿ ಪರಿಚಯಿಸುವರು.ಯುಎಇ ಎಕ್ಸ್ಛೇಂಜ್ ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಯೆಣ್ಮಕಜೆ, ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಬಂಟ್ವಾಳ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ, ಕೆನರಾ ಕಾಲೇಜು, ಮಂಗಳೂರು ಉಪನ್ಯಾಸಕ ಅರುಣ್ ಉಳ್ಳಾಲ್ ಉಪಸ್ಥಿತರಿರುವರು.ಸಾಧಕರಿಗೆ ಸನ್ಮಾನ, ಗೌರವ ಅಭಿನಂದನೆ, ಬಹುಮಾನ ವಿತರಣೆ ನಡೆಯಲಿದೆ.





