ಬದಿಯಡ್ಕ: ಕೋವಿಡ್ 19 ರ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ನಿರ್ದೇಶಿಸಿರುವ ಮಾರ್ಗಸೂಚಿಗಳನ್ನು ಪರಿಗಣಿಸಿ ಅಗಲ್ಪಾಡಿ ಜಯನಗರದ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಆವರಣದಲ್ಲಿ ಏಪ್ರಿಲ್ 25 ರಿಂದ 28 ರ ತನಕ ನಡೆಯಲಿದ್ದ ನೂತನ ಭೋಜನ ಶಾಲೆ ಮತ್ತು ಸಭಾಭವನದ ಲೋಕಾರ್ಪಣಾ ಸಮಾರಂಭದ ಸರ್ವ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಲಾಗಿದೆ.
ಏ. 22 ಗುರುವಾರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ನಡೆದ ಗೌರವ ಸಲಹಾ ಸಮಿತಿ ಹಾಗೂ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಕಾರ್ಯಕಾರೀ ಸಮಿತಿ ಮತ್ತು ಇತರ ಉಪಸಮಿತಿಗಳ ಸಂಯುಕ್ತ ವಿಶೇಷ ಸಭೆಯಲ್ಲಿ ಸಭಾಭವನ ಮತ್ತು ಭೋಜನ ಶಾಲೆಯ ಲೋಕಾರ್ಪಣೆ , ಲಕ್ಕೀ ಕೂಪನ್ ಡ್ರಾ ,ಮತ್ತು ಇತರ ಎಲ್ಲಾ ಸಾಂಸ್ಕøತಿಕ ಹಾಗೂ ಸಭಾ ಕಾರ್ಯಕ್ರಮಗಳ ಸರ್ವ ಸಮಾರಂಭಗಳನ್ನು ತಾತ್ಕಾಲಿಕವಾಗಿ ಮುಂದೂಡುವ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಹಾಗೂ ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






