ತಿರುವನಂತಪುರ: ತಿರುವನಂತಪುರಂನಲ್ಲಿ ಲಸಿಕೆಗಳ ತಯಾರಿಕೆಗೆ ಸಂಬಂಧಿಸಿದಂತೆ ದೀರ್ಘಾವಧಿಯ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವÀರು. ಲಸಿಕೆ ಕಂಪನಿಗಳು ಲೈಫ್ ಸೈನ್ಸ್ ಪಾಕ್ರ್ನ ಸ್ಥಳವನ್ನು ಬಳಸಿಕೊಂಡು ಲಸಿಕೆ ಉತ್ಪಾದನಾ ಘಟಕ ಸ್ಥಾಪಿಸಲು ಆಸಕ್ತಿ ಹೊಂದಿವೆ. ಈ ಬಗ್ಗೆ ಪರಿಗಣಿಸಲಾಗುವುದು ಎಂದು ಸಿಎಂ ಹೇಳಿದರು.
ಜೂನ್ ಮೊದಲ ವಾರದಿಂದ ಹೆಚ್ಚಿನ ಲಸಿಕೆಗಳನ್ನು ನಿರೀಕ್ಷಿಸಲಾಗಿದೆ. ಜೂನ್ 15 ರೊಳಗೆ ಗರಿಷ್ಠ ಜನರಿಗೆ ಲಸಿಕೆ ನೀಡಲಾಗುವುದು ಎಂದು ಸಿಎಂ ಹೇಳಿದರು. ಲಸಿಕೆಯನ್ನು ನಸಿರ್ಂಗ್ ಹೋಂನಲ್ಲಿರುವ ಎಲ್ಲರಿಗೂ ನೀಡಲಾಗುವುದು. ಬುಡಕಟ್ಟು ವ್ಯಾಪ್ತಿಗಳಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವ್ಯಕ್ತಿಗಳಿಗೆ ಲಸಿಕೆ ಪೂರ್ಣಗೊಳಿಸಲಾಗುವುದು. ಲಸಿಕೆ ಒಳರೋಗಿಗಳಿಗೆ ಲಭ್ಯವಾಗುವಂತೆ ಯೋಜನೆಯನ್ನು ರೂಪಿಸಲಾಗುವುದು ಎಂದರು.
18 ರಿಂದ 45 ವರ್ಷದೊಳಗಿನ ಜನರಿಗೆ ವ್ಯಾಕ್ಸಿನೇಷನ್ ಪ್ರಾರಂಭಿಸಿದಾಗ, ಮೇ 19 ರಂದು ಹೊರಡಿಸಿದ ಆದೇಶವು 32 ವರ್ಗದ ಜನರಿಗೆ ಆದ್ಯತೆ ನೀಡಿತು. ಮೇ 24 ರಂದು ಹೊರಡಿಸಿದ ಆದೇಶದ ಪ್ರಕಾರ 11 ಹೊಸ ವಿಭಾಗಗಳನ್ನು ಸೇರಿಸಲಾಗಿದೆ. ಉದ್ಯೋಗ ಮತ್ತು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವವರೂ ಇದರಲ್ಲಿ ಸೇರಿದ್ದಾರೆ. ಪಾಸ್‍ಪೆÇೀರ್ಟ್ ಸಂಖ್ಯೆ ಸೇರಿದಂತೆ ಅಗತ್ಯ ಪ್ರಮಾಣಪತ್ರಗಳನ್ನು ನೀಡುವಂತೆ ಜಿಲ್ಲಾ ವೈದ್ಯಕೀಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಸಿಎಂ ಹೇಳಿದರು.


