ತಿರುವನಂತಪುರ: ರಾಜ್ಯದಲ್ಲಿ ದೈನಂದಿನ ಕೋವಿಡ್ ಬಾಧಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ವಿನಾಯಿತಿ ಪ್ರಕಟಿಸಿದೆ. ಮೂರನೇ ಅವಧಿಯ ಲಾಕ್ ಡೌನ್ ನಾಳೆಯಿಂದ ಜೂನ್ 9 ರವರೆಗೆ ವಿಸ್ತರಿಸಲಾಗಿದ್ದರೂ, ಕೆಲವು ಪ್ರದೇಶಗಳಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೋವಿಡ್ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ರಿಯಾಯಿತಿಗಳನ್ನು ಘೋಷಿಸಿದರು.
ಜೂನ್ 9 ರವರೆಗೆ ಲಾಕ್‍ಡೌನ್:
ರಾಜ್ಯದಲ್ಲಿ ಲಾಕ್ ಡೌನ್ ಜೂನ್ 9 ರ ವರೆಗೆ ವಿಸ್ತರಿಸಲಾಗಿದೆ. ಮೇ 30 ರವರೆಗೆ ಘೋಷಿಸಲಾಗಿದ್ದ ಲಾಕ್‍ಡೌನ್ ಇಂದು ಕೊನೆಗೊಳ್ಳಲಿರುವ ಕಾರಣ ಇನ್ನೂ ಹತ್ತು ದಿನಗಳವರೆಗೆ ವಿಸ್ತರಿಸಲಾಗಿದೆ. ಮೇ 30 ರಿಂದ ಮಲಪ್ಪುರಂನಲ್ಲಿ ಟ್ರಿಪಲ್ ಲಾಕ್ ಡೌನ್ ಇರದು. ಅಗತ್ಯ ವಿಷಯಗಳಿಗೆ ಮಾತ್ರ ರಿಯಾಯಿತಿ ನೀಡಲಾಗುತ್ತದೆ ಎಂದು ಸಿಎಂ ಹೇಳಿದರು. ರಿಯಾಯಿತಿಗಳ ಹೊರತಾಗಿಯೂ, ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದರು.
ಕೈಗಾರಿಕಾ ಪ್ರದೇಶಗಳಿಗೆ ರಿಯಾಯಿತಿ:
ರಾಜ್ಯದ ಕೈಗಾರಿಕಾ ಕ್ಷೇತ್ರಗಳಿಗೆ ರಿಯಾಯಿತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೈಮಗ್ಗ ಮತ್ತು ಗೋಡಂಬಿ ಬೀಜಗಳು ಸೇರಿದಂತೆ ರಾಜ್ಯದ ಎಲ್ಲಾ ಕೈಗಾರಿಕೆಗಳನ್ನು ತೆರೆಯಲಾಗುವುದು ಮತ್ತು ಅಗತ್ಯವಿರುವ ಕನಿಷ್ಠ ಸಿಬ್ಬಂದಿಗಳೊಂದಿಗೆ ನಿರ್ವಹಿಸಬಹುದು. ಶೇಕಡಾ 50 ಕ್ಕಿಂತ ಹೆಚ್ಚು ಜನರು ಉದ್ಯೋಗ ಕ್ಷೇತ್ರಕ್ಕೆ ಏಕಕಾಲದಲ್ಲಿ ಅನುಮತಿ ನೀಡಲಾಗುವುದಿಲ್ಲ.
ಬ್ಯಾಂಕುಗಳ ಸಮಯದಲ್ಲಿನ ಬದಲಾವಣೆ:
ರಾಜ್ಯದ ಬ್ಯಾಂಕುಗಳು ವಾರದಲ್ಲಿ ಮೂರು ದಿನ ಕಾರ್ಯನಿರ್ವಹಿಸುತ್ತವೆ. ಕೆಲಸದ ಸಮಯವನ್ನು ಸಂಜೆ 5 ಕ್ಕೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕೈಗಾರಿಕಾ ಸಂಸ್ಥೆಗಳಿಗೆ ಕಚ್ಚಾ ವಸ್ತುಗಳು ಮತ್ತು ಇತರ ಅವಶ್ಯಕತೆಗಳನ್ನು ಒದಗಿಸುವ ಸಂಸ್ಥೆಗಳು ಮತ್ತು ಅಂಗಡಿಗಳು ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಸಂಜೆ 5 ಗಂಟೆಯವರೆಗೆ ಕಾರ್ಯನಿರ್ವಹಿಸಬಹುದು. ಪಾರ್ಸೆಲ್ ಶೇಖರಣಾ ಪ್ರದೇಶಗಳು ವಾರದಲ್ಲಿ ಎರಡು ದಿನ ತೆರೆದಿರಬಹುದು.
ತೆರೆಯಬಹುದಾದ ಅಂಗಡಿಗಳು ಯಾವುವು?:
ಶೈಕ್ಷಣಿಕ ವಸ್ತುಖ ಮಾರಾಟ ಅಂಗಡಿಗಳು, ಪುಸ್ತಕ ಮಳಿಗೆಗಳು, ವಿವಾಹದ ಜವಳಿ, ಚಿನ್ನ ಮತ್ತು ಪಾದರಕ್ಷೆಗಳ ಅಂಗಡಿಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಜೆ 5 ಗಂಟೆಯವರೆಗೆ ತೆರೆದಿರುತ್ತವೆ. ಕೋವಿಡ್ ಪೆÇ್ರೀಟೋಕಾಲ್ ಅನುಸರಿಸಿ ಜೀನಸು ಅಂಗಡಿಗಳಿಗೆ ಪಾರ್ಸೆಲ್ ತಲುಪಿಸಬಹುದು. ರಿಯಾಯಿತಿಗಳ ಭಾಗವಾಗಿ ತೆರೆಯುವ ಸಂಸ್ಥೆಗಳನ್ನು ಸೋಂಕುರಹಿತಗೊಳಿಸಬೇಕು. ಅಂಗಡಿಯ ಗಾತ್ರಕ್ಕನುಸರಿಸರಿಸಿ ಮಾತ್ರ ಜನರನ್ನು ಪ್ರವೇಶಿಸಲು ಅನುಮತಿ ನೀಡಬೇಕು. ಮಾಸ್ಕ್ ಮತ್ತು ಸ್ಯಾನಿಟೈಜರ್‍ಗಳನ್ನು ಬಳಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.



