ತಿರುವನಂತಪುರ: ಕೇರಳ 15 ನೇ ವಿಧಾನ ಸಭೆಗೆ ಆಯ್ಕೆಯಾಗಿರುವ ನೂತನ ಶಾಸಕರ ಪ್ರಮಾಣ ವಚನ ಮೇ.24 ರಂದು ನಡೆಯಲಿದೆ. ಇಂದು ಶಾಸಕರ ಪ್ರಮಾಣವಚನ ಸಮಾರಂಭದ ಅಧ್ಯಕ್ಷತೆ ವಹಿಸಲು ಹಂಗಾಮಿ ಸ್ಪೀಕರ್ ನ್ನು ಇಂದಿನ ಮೊದಲ ಕ್ಯಾಬಿನೆಟ್ ಸಭೆ ನಿರ್ಧರಿಸುತ್ತದೆ. ಮೇ.25 ರಂದು ಸ್ಪೀಕರ್ ಆಯ್ಕೆ ನಡೆಯಲಿದೆ.
ಎಲ್‍ಡಿಎಫ್ ಈಗಾಗಲೇ ಎಂಬಿ ರಾಜೇಶ್ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಶಾಸಕರ ಪ್ರಮಾಣವಚನ ಸಮಾರಂಭದ ಅಧ್ಯಕ್ಷತೆಯನ್ನು ಹಂಗಾಮಿ ಸ್ಪೀಕರ್ ವಹಿಸಲಿದ್ದಾರೆ.





