ಕಾಸರಗೋಡು: ಪೋಲೀಸ್ ಇಲಾಖೆಯು ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಕಟ್ಟುನಿಟ್ಟು ಬಿಗಿಗೊಳಿಸಿದೆ.
ಕೋವಿಡ್ ಸೋಂಕು ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು 7 ವಿಭಾಗಗಳಾಗಿ ವಿಂಗಡಿಸಿ ಪ್ರತಿ ವಲಯಗಳಲ್ಲೂ ಕಟ್ಟುನಿಟ್ಟು ಬಿಗಿಗೊಳಿಸಿ, ಅದರ ಹೊಣೆಯನ್ನು ಒಬ್ಬ ಡಿ.ವೈ.ಎಸ್.ಇ.ಗೆ ನೀಡಲಾಗುವುದು. ಆ ಡಿ.ವೈ.ಎಸ್.ಪಿ.ಯ ಕೈಕೆಳಗೆ ಒಬ್ಬ ಎಸ್.ಐ, ಒಬ್ಬ ಎ.ಎಸ್.ಐ., ಮೂವರು ಪೆÇಲೀಸ್ ಸಿಬ್ಬಂದಿ ಎಂಬಂತೆ 5 ಮಂದಿಯ ತಂಡ ಚಟುವಟಿಕೆ ನಡೆಸಲಿದೆ.
ಕಂಟೈನ್ಮೆಂಟ್ ಝೋನ್ ಗಳನ್ನು ಪ್ರತ್ಯೇಕ ಮಾರ್ಕ್ ನಡೆಸಿ ಅಲ್ಲಿ ಹೆಚ್ಚುವರಿ ಕಟ್ಟುನಿಟ್ಟು ಏರ್ಪಡಿಸುವುದು, ಜನಜಾಗೃತಿ ಸಮಿತಿಗಳೊಂದಿಗೆ ಹೆಗಲು ನೀಡಿ ಅಗತ್ಯದ ಸಾಮಾಗ್ರಿಗಳನ್ನು ಮನೆಗಳಿಗೇ ತಲಪಿಸುವುದು, ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿ ಖಚಿತಪಡಿವುದು, ಪ್ರತ್ಯೇಕ ಬೈಕ್ ಗಸ್ತು ಸಹಿತ ಹೊಣೆಗಾರಿಕೆಯನ್ನು ಈ ತಂಡ ನಡೆಸಲಿವೆ.





