ಕಾಸರಗೋಡು: ಕೇಂದ್ರ ಸರಕಾರ ದೇಶಾದ್ಯಂತ ಸ್ಥಾಪಿಸಲಿರುವ ಆಕ್ಸಿಜನ್ ಪ್ಲಾಂಟ್ ಗೆ ನೇಮಕಾತಿ ನಡೆಸುವ ನಿಟ್ಟಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್, ಪಾರಾ ಮೆಡಿಕಲ್ ಪರಿಣತಿ ಹೊಂದಿರುವ ನಿವೃತ್ತ ಸೈನಿಕರ ಮಾಹಿತಿಗಳನ್ನು ಕೇಂದ್ರೀಯ ಸೈನಿಕ ಮಂಡಳಿ ಸಂಘ್ರಹಿಸುತ್ತಿದೆ. ಸಂಬಂಧ ಪಟ್ಟ ಅರ್ಹತೆ ಹೊಂದಿರುವ ನಿವೃತ್ತ ಸೈನಿಕರು ಕಾಸರಗೋಡು ಜಿಲ್ಲಾ ಸೈನಿಕ ಕಲ್ಯಾಣ ಕಚೇರಿ( ದೂರವಾಣಿ ಸಂಖ್ಯೆ: 04994256860.) ಯನ್ನು ಸಂಪರ್ಕಿಸಬಹುದು.




