HEALTH TIPS

ಪೋಲೀಸರು ಆಗಮಿಸಿದಾಗ ಕೊರೋನಾ ರೋಗಿ ಮನೆಯಲ್ಲಿರಲಿಲ್ಲ: ಪತ್ನಿಗೆ ವಾಹನ ಕಲಿಸಲು ರಸ್ತೆಯಲ್ಲಿ: ಸೋಂಕಿತನ ವಿರುದ್ಧ ಪ್ರಕರಣ!

            ವಯನಾಡ್: ಕೊರೋನಾ ರೋಗಿಯೊಬ್ಬರು ಬೀದಿಗಿಳಿದು ಕೊರೋನಾ ಮಾನದಂಡಗಳನ್ನು ಉಲ್ಲಂಘಿಸಿ ಪತ್ನಿಗೆ ವಾಹನ ಚಾಲನೆ ತರಬೇತಿ ನೀಡುತ್ತಿದ್ದುದು ಬೆಳಕಿಗೆ ಬಂದಿದೆ. ವಯನಾಡ್ ಕೊನಿಚೀರ ತಾಳೆಮುಂಡ್ ಎಂಬಲ್ಲಿ ನಿನ್ನೆ ಈ ಘಟನೆ ನಡೆದಿದೆ. ರೋಗಿಯನ್ನು ಹುಡುಕಿಕೊಂಡು ಪೋಲೀಸರು ಮನೆಗೆ ಆಗಮಿಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು ಪೋಲೀಸರು ದೂರು ದಾಖಲಿಸಿರುವರು. 

               ಕೊರೋನಾ ಪಾಸಿಟಿವ್ ಆದವರಿಗಿರುವ ಮಾನದಂಡಗಳನ್ನು ಅನುಸರಿಸಲಾಗುತ್ತಿದೆಯೇ  ಎಂದು ಪರಿಶೀಲನೆ ನಡೆಸಲು ಪೋಲೀಸರು ಅವರ ಮನೆಗೆ ಭೇಟಿ ನೀಡಿದ್ದರು. ಆದರೆ ಆ ವೇಳೆ ಪಾಸಿಟಿವ್ ಆಗಿರುವ ಸೋಂಕಿತ ಮನೆಯಲ್ಲಿ ಇರಲಿಲ್ಲ. ಆಗ ಸಂಬಂಧಿಕರನ್ನು ಪ್ರಶ್ನಿಸಿದಾಗ ಅಸಂಬದ್ದ ಉತ್ತರಗಳು ಲಭ್ಯವಾದವು. ಇದರಿಂದ ಸಂಶಯಗೊಂಡ ಪೋಲೀಸರು ಸೋಂಕಿತನನ್ನು ದೂರವಾಣಿಯಲ್ಲಿ ಸಂಪರ್ಕಿಸಿದರು. 

          ಕೊರೋನಾ ರೋಗಿಯು ಪರೀಕ್ಷೆಗೆ ತೆರಳುತ್ತಿದ್ದೇನೆ  ಎಂದು ಉತ್ತರಿಸಿದ. ಬಳಿಕ ಪೋಲೀಸರು ಸಾರ್ವಜನಿಕ ಶೋಧಕ್ಕೆ ತೆರಳಿದ್ದು, ಈ ವೇಳೆ ಸೋಂಕಿತ ವ್ಯಕ್ತಿ ಆತನ ಪತ್ನಿಗೆ ವಾಹನ ಚಲಾಯಿಸುವುದನ್ನು ಕಲಿಸುತ್ತಿರುವುದು ಕಂಡುಬಂದಿತು. ಲಾಕ್ ಡೌನ್ ಉಲ್ಲಂಘನೆಗಾಗಿ ಪೋಲೀಸರು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries