HEALTH TIPS

ಸಮರಸ ಸಂವಾದ: ಕಾಸರಗೋಡಿನಲ್ಲಿ ಕೋವಿಡ್ ನಿಯಂತ್ರಣ: ಚಿಕಿತ್ಸೆ,ಮುನ್ನೆಚ್ಚರಿಕೆ ಬಗ್ಗೆ ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ವ್ಯೆದ್ಯ ಡಾ.ಜನಾರ್ದನ್ ನಾಯ್ಕ್ ಅವರೊಂದಿಗಿನ ಸಂದರ್ಶನ...ಸಮರಸ ಸುದ್ದಿಯ ವೀಕ್ಷಕರಿಗಾಗಿ.

  ಹೆಸರು: ಡಾ. ಜನಾರ್ದನ ನಾಯ್ಕ್ .ಸಿ. ಎಚ್ ಕಚೇರಿ: ಕನ್ಸಲ್ ಟೆಂಟ್ ಫಿಸಿಷಿಯನ್ ಮತ್ತು ಹಿರಿಯ ವೈದ್ಯಾಧಕಾರಿ, ಏ ಆರ್ ಟಿ ಕೇಂದ್ರ.
ಜನರಲ್ ಆಸ್ಪತ್ರೆ, ಕಾಸರಗೋಡು.

ವಿದ್ಯಾಭ್ಯಾಸ:
೧-೭: ಜ್ಞಾನೋದಯ ಶಾಲೆ ಮಾನ್ಯ.
೮-೧೦: ನವಜೀವನ ಹೈ ಸ್ಕೂಲ್, ಪೆರಡಾಲ.
ಪದವಿ ಪೂರ್ವ: ಸರಕಾರಿ ಕಾಲೇಜು, ಕಾಸರಗೋಡು.
ಎಂ ಬಿ ಬಿ ಎಸ್: ಕಲ್ಲಿಕೋಟೆ ವೈದ್ಯಕೀಯ  ಕಾಲೇಜು.
ಎಂ ಡಿ: ಕಲ್ಲಿಕೋಟೆ ವೈದ್ಯಕೀಯ ಕಾಲೇಜು.
ಪಿ ಜಿ ಡಿ ಜಿ ಎಂ.: ಏ ಐ ಎಂ ಎಸ್, ಕೊಚ್ಚಿ.
ಏಚ್ ಐ ವಿ ತಜ್ಞ ತರಭೇತಿ : ಸಿ. ಎಂ.ಸಿ. ವೆಲ್ಲೂರು, ತಮಿಳುನಾಡು.
ಎಫ್ ಸಿ ಜಿ ಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್.

ಕನ್ನಡದಲ್ಲಿ ಕಥೆಗಳನ್ನು  , ಕವಿತೆಗಳನ್ನು, ಪ್ರಬಂಧ ಗಳನ್ನು ಬರೆದಿದ್ದಾರೆ. ಲಾಕ್ ಡೌನ್ ಸಂದರ್ಭ ದಲ್ಲಿ ಕೊರೋನ ಹಾಡುಗಳನ್ನು, ಜನರಿಗೆ ಅರಿವು ಮೂಡಿಸುವ ಕವಿತೆಗಳನ್ನು ರಚಿಸಿದ್ದಾರೆ. ಲಾಕ್ ಡೌನ್ ಸಂದರ್ಭ  ರಾಜ್ಯಗಳ ಗಡಿಪ್ರದೇಶ ದ ಜನರ ಅನುಭವಿಸಿದ ಬವಣೆಗಳ ಆಧಾರಿತ " ಬಿರುಕು" ಎಂಬ ಕಥೆ ಯನ್ನು ಬರೆದಿದ್ದಾರೆ. ತಾವು ಬರೆದ ಕೊರೋನ ಹಾಡನ್ನು ಮಗಳಿಂದ ನೃತ್ಯ ರೂಪಕ ಮಾಡಿಸಿ, ಜನ ಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಮಾಜಿಕ ತಾಣಗಳಲ್ಲಿ ಪ್ರಸ್ತುತ ಪಡಿಸಿದ್ದಾರೆ. 





ಭಾರತದಲ್ಲಿ ಮೊಟ್ಟಮೊದಲು ಕೊರೋನ ಕಾಸರಗೋಡು ಜಿಲ್ಲೆಗೆ ಬಾಧಿಸಿದಾಗ, ರೋಗಿಗಳ ಚಿಕಿತ್ಸಾ ತಂಡದಲ್ಲಿ ಮುಂಚೂಣಿಯಲ್ಲಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಯ ಕೊವಿಡ್ ರೋಗ ಚಿಕಿತ್ಸಾ  ತಂಡದ ಅಧ್ಯಕ್ಷ ರಾಗಿ ದುಡಿದಿದ್ದಾರೆ. ತಮ್ಮ ನಿಸ್ವಾರ್ಥ ಸೇವೆಗೆ ಐ ಎಂ ಎ ಯ ರಾಷ್ಟ್ರಾಧ್ಯಕ್ಷ ರಿಂದ ಪ್ರಶಸ್ತಿ ಯನ್ನು ಪಡೆದಿದ್ದಾರೆ. ಕೊರೋನ ರೋಗಿಗಳಿಗೆ ತಜ್ಞ ಚಿಕಿತ್ಸೆ ನೀಡಿದ, ತಮ್ಮ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಕೊಟ್ಟಾಯಂ ನ ಗಾಂಧೀಜಿ ಸ್ಟಡಿ ಸೆಂಟರ್ ನ ಶಿಫಾರಸಿನ ಮೇರೆಗೆ, ಎನ್ ಜಿ ಓ ಫ್ರಂಟ್ ನವರು " ಅತ್ಯುತ್ತಮ ವೈದ್ಯ ೨೦೨೦" ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಡಾಕ್ಟರ್ ಜನಾರ್ದನ ರವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅನೇಕ ಸಂಶೋದನಾ ಪ್ರಬಂಧ ಗಳನ್ನು ಮಂಡಿಸಿದ್ದಾರೆ. ತಮ್ಮ " ವಿಷ ಹಾವು ಕಡಿತ ಚಿಕಿತ್ಸೆ" ಪ್ರಬಂಧ ಕ್ಕೆ ಕೇರಳ ಸರಕಾರಿ ವೈದ್ಯ ಒಕ್ಕೂಟವು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅದೂ ಅಲ್ಲದೆ ೨೦೧೮ ಸಾಲಿನ ಕೇರಳ ರಾಜ್ಯ ಮಟ್ಟದ ಅತ್ಯುತ್ತಮ ವೈದ್ಯ ಪ್ರಶಸ್ತಿ ಯನ್ನು ನೀಡಿ ಗೌರವಿಸಿದೆ.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಕಾರ್ಯವೆಸುಗಿತಿರುವ ಎಚ್ ಐ ವಿ ಚಿಕಿತ್ಸಾ ಕೇಂದ್ರ ದಲ್ಲಿ ತಮ್ಮ ಸ್ತುತ್ಯರ್ಹ ಸೇವೆಗೆ ಸರಕಾರ ದಿಂದ ಐದು ಬಾರಿ ಪ್ರಶಸ್ತಿ ಗಳನ್ನು ಪಡೆದಿದ್ದಾರೆ. ಎಚ್ ಐ ವಿ ಬಾಧಿತರ ಚಿಕತ್ಸೆ ಮತ್ತು ಪುನರ್ವಸತಿ ಗೆ ಅನೇಕ ಯೋಜನೆ ಗಳನ್ನು ತಯಾರಿಸಿ ಜನ ಮೆಚ್ಚುಗೆ ಪಡೆದಿದ್ದಾರೆ.

ಏಳನೇ ತರಗತಿ ಯಿಂದ  ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಇವರು ಇಂದಿಗೂ ಬಿಡುವು ವೇಳೆ ಕಥೆ , ಕವಿತೆಗಳನನ್ನು  ಬರೆಯುತ್ತಿದ್ದಾರೆ. ವೈದ್ಯ ವೃತ್ತಿ , ಸಾಹಿತ್ಯದೊಂದಿಗೆ, ನಾಟಕ ಗಳಲ್ಲಿ ಮತ್ತು ಕಿರು ತೆರೆ ಯಲ್ಲೂ ಕೂಡ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಘದಲ್ಲಿ, ಕೇರಳ ಸರಕಾರಿ ವೈದ್ಯರ ಒಕ್ಕೂಟ ದಲ್ಲಿ, ಅಸೋಸಿಯೇಶನ್ ಆಫ್ ಫಿಸಿಷಿಯನ್ಸ್ ಆಫ್ ಇಂಡಿಯಾದ ನಾಯಕತ್ವದಲ್ಲಿ ದುಡಿದಿದ್ದಾರೆ. ಅಲ್ಲದೆ  ಭಾರತೀಯ ಟಿಬಿ ಸೊಸೈಟಿ, ಏಡ್ಸ್ ಸೊಸೈಟಿ, ರೆಡ್ ಕ್ರಾಸ್ ಸೊಸೈಟಿ , ಇಂಡಿಯನ್ ಡಯಾಬಿಟೀಸ್ ರಿಸರ್ಚ್ ಸೊಸೈಟಿ ಹಾಗೂ ಇನ್ನಿತರ ಶಿಕ್ಷಣ ಸಂಘಟನೆ ಗಳಲ್ಲಿ ಅಜೀವ ಸದಸ್ಯರಾಗಿದ್ದಾರೆ.
ಪ್ರಸ್ತುತ ಡಾಕ್ಟರ್ ಜನಾರ್ದನ ರವರು ಕಾಸರಗೋಡಿನ ರೋಟರಿ ಕ್ಲಬ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದಾರೆ. ರೋಟರಿ ಕ್ಲಬ್ ನ ವತಿ ಯಿಂದ ಅನೇಕ ಜನಪರ ಯೋಜನೆ ಗಳನ್ನು ಜಾರಿಗೊಳಿಸಿ ಜನಮೆಚ್ಚುಗೆ ಪಡೆದಿದ್ದಾರೆ.

ಶ್ರೀಮತಿ ರೂಪ ಶ್ರೀ ಯವರನ್ನು ಮದುವೆಯಾಗಿರುವ ಇವರಿಗೆ ಇಬ್ಬರು ಮಕ್ಕಳು. ಮಗ ತೇಜಸ್ ಜೆ ಕರ್ಮಲೆ ಮಂಗಳೂರು ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿ ಯಾಗಿದ್ದಾನೆ. ಮಗಳು ಹಿಮಜ ಬಾಯಿ ಕಾಸರಗೋಡಿನ ಚಿನ್ಮಯ ಶಾಲೆ ಯಲ್ಲಿ ಆರನೇ ತರಗತಿಯಲ್ಲಿ ಕಲಿಯುತಿದ್ದಾಳೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries