ಕೊಚ್ಚಿ: ಕೇರಳದ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಕೆ.ಕೆ.ಶೈಲಜಾ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ನಿರಾಕರಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರತಿಭಟನೆಗಳು ವ್ಯಕ್ತವಾಗಿವೆ.ಚಿತ್ರ ನಟಿಯರಾದ ಪಾರ್ವತಿ ತಿರುವೋಥ್, ಅಹನಾ ಕೃಷ್ಣಕುಮಾರ್, ರಿಮಾ ಕಲ್ಲಿಂಗಲ್, ನಿರ್ದೇಶಕ ಗೀತು ಮೋಹನ್‍ದಾಸ್ ಮತ್ತು ನಿರೂಪಕಿ ರಂಜಿನಿ ಹರಿದಾಸ್ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ಷೇಪಗಳನ್ನು ಹರಿಯಬಿಟ್ಟಿದ್ದಾರೆ.
ಪಾರ್ವತಿ ತಮ್ಮ ಇನ್ಸ್ಟಾಗ್ರಾಮ್ ಪೆÇೀಸ್ಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಮರ್ಥ ನಾಯಕಿಯನ್ನು ವಜಾಗೊಳಿಸಲು ಎಡಪಕ್ಷದಲ್ಲಿ ಯಾವುದೇ ಸಮರ್ಥನೆ ಇಲ್ಲ ಎಂದು ಹೇಳಿರುವರು. "ಅಧಿಕಾರ ಯಾವಾಗಲೂ ಜನರ ಕೈಯಲ್ಲಿರಬೇಕು" ಎಂದು ಅವರು ಬರೆದಿರುವರು. ಗೀತು ಮೋಹನ್‍ದಾಸ್ ಅವರು, ಗೌರಿಯಮ್ಮ ಮತ್ತು ಶೈಲಜಾ ಟೀಚರ್ ಅವರಿಬ್ಬರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗೀತು ಮೋಹನ್‍ದಾಸ್ ಏನನ್ನೂ ಹೇಳದೆ ಎಲ್ಲವನ್ನೂ ಚಿತ್ರ ಮೂಲಕ ಹೇಳಿದ್ದಾರೆ. ಗೌರಿಯಮ್ಮರ ಪ್ರತ್ಯೇಕತೆಯ ನಂತರ, ಕೇರಳವು ತನ್ನ ಪ್ರತಿಭೆಯ ಹೊರತಾಗಿಯೂ, ಕೇರಳ ಮಹಿಳಾ ಮುಖ್ಯಮಂತ್ರಿಯನ್ನು ಕಳೆದುಕೊಂಡಿರುವುದನ್ನು ನೆನಪಿಸಿಕೊಂಡರು.
ಗೀತು ಮೋಹನ್‍ದಾಸ್ ಅವರ ಮತ್ತೊಂದು ಪೆÇೀಸ್ಟ್ ನ್ನು ಅಹನಾ ಹಂಚಿಕೊಂಡಿದ್ದಾರೆ. ಇದು ಅನಿರೀಕ್ಷಿತ, ಅವಮಾನಕರ ಮತ್ತು ಮೂರ್ಖತನ ಎಂದು ರಂಜಿನಿ ಹರಿದಾಸ್ ಅವರ ಪೋಸ್ಟ್ ಹೇಳುತ್ತದೆ. "ಸ್ತ್ರೀಯಾದರೆ ತಪ್ಪೇನು?" ಎಂಬ ಶೈಲಜಾ ಟೀಚರ್ ಅವರ ಮಾತುಗಳನ್ನು ಆಧರಿಸಿ ರಿಮಾ ಕಲ್ಲಿಂಗಲ್ ಅವರ ಪೋಸ್ಟ್ ಇತ್ತು. ದಾಖಲೆಯ ಚುನಾವಣಾ ಗೆಲುವು ಮತ್ತು 5 ವರ್ಷಗಳ ವಿಶ್ವ ದರ್ಜೆಯ ಸೇವೆಯನ್ನು ನೀಡಿರುವ ಶೈಲಜಾ ರಿಗೆ ಸಿಪಿಐ (ಎಂ) ನಲ್ಲಿ ಸ್ಥಾನ ಸಿಗದಿದ್ದರೆ ಏನು ಮಾಡಬಹುದು? ರಿಮಾ ಕಲ್ಲಿಂಗಲ್ ಆ ಬಗ್ಗೆ ಬರೆದಿದ್ದಾರೆ. ಶೈಲಜ ಈ ಬಗ್ಗೆ ಪಕ್ಷದೊಂದಿಗೆ ಚರ್ಚಿಸಬೇಕು ಎಂದು ಹ್ಯಾಶ್‍ಟ್ಯಾಗ್‍ನೊಂದಿಗೆ ರಿಮಾ ಕಲ್ಲಿಂಗಲ್ ಅವರು ಪ್ರತಿಕ್ರಿಯಿಸಿದ್ದಾರೆ.





