ತಿರುವನಂತಪುರ: ಕೊಡಿಯೇರಿ ಬಾಲಕೃಷ್ಣನ್ ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿಯಾಗಿ ಮರಳಲಿದ್ದಾರೆ ಎಂಬ ಸೂಚನೆಗಳಿವೆ. ಕೊಡಿಯೇರಿ ಬಾಲಕೃಷ್ಣನ್ ಅನಾರೋಗ್ಯದ ಕಾರಣ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.
ಸಿಪಿಐ (ಎಂ) ಪಾಲಿಟ್ ಬ್ಯೂರೋ ಈ ಕುರಿತು ನಾಳೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಹೊಸ ಸಂಪುಟದ ಖಾತೆಗಳನ್ನು ನಿರ್ಧರಿಸಲು ಸಭೆ ನಾಳೆ ನಡೆಯಲಿದೆ. ಸಭೆಯಲ್ಲಿ ಅಧಿಕೃತ ಪ್ರಕಟಣೆ ಇರಬಹುದು ಎನ್ನಲಾಗಿದೆ.
ಎಡರಂಗದ ಕನ್ವೀನರ್ ಆಗಿರುವ ಎ,ವಿಜಯರಾಘವನ್ ಪ್ರಸ್ತುತ ಹಂಗಾಮಿ ಕಾರ್ಯದರ್ಶಿಯಾಗಿದ್ದಾರೆ.





