HEALTH TIPS

ಇಸ್ರೇಲ್ ನಿಮ್ಮೊಂದಿಗಿದೆ: ನೆರವು ನೀಡುತ್ತದೆ; ಕೊಲ್ಲಲ್ಪಟ್ಟ ದಾದಿ ಸೌಮ್ಯಾರ ಕುಟುಂಬವನ್ನು ಸಂಪರ್ಕಿಸಿದ ಇಸ್ರೇಲ್ ಅಧ್ಯಕ್ಷ!

                 ಇಡುಕ್ಕಿ: ಇಸ್ರೇಲ್ ನಲ್ಲಿ ಹಮಾಸ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ದಾದಿ ಸೌಮ್ಯಾ ಸಂತೋಷ್ ಅವರ ಕುಟುಂಬದೊಂದಿಗೆ ಇಸ್ರೇಲ್ ಅಧ್ಯಕ್ಷರು ಮಾತನಾಡಿ ಭರವಸೆ ನೀಡಿರುವರು. 

             ಇಸ್ರೇಲ್ ಅಧ್ಯಕ್ಷ ರುಯೆನ್ ರಿವ್ಲಿನ್ ಅವರು ಮಂಗಳವಾರ  ಸೌಮ್ಯಾ ಕುಟುಂಬದೊಂದಿಗೆ ಸಂಪರ್ಕಿಸಿ ಅವರ ಸಾವಿನಿಂದ ತೀವ್ರ ಬೇಸರವಾಗಿದೆ ಎಂದು ಅವರು ಹೇಳಿದರು. ರಿವ್ಲಿನ್ ಅವರು ಸೌಮ್ಯಾ ಅವರ ಪತಿ ಸಂತೋಷ್ ಮತ್ತು ಕುಟುಂಬದ ಇತರ ಸದಸ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು.


                  ಸೌಮ್ಯಾ ಅವರ ಕುಟುಂಬದೊಂದಿಗೆ ಇಸ್ರೇಲ್ ಸದಾ ನೆರವಿಗಾಗಿ ಇರಲಿದೆ. ಸೌಮ್ಯಾ ಅವರ ನಿಧನಕ್ಕೆ ರಿವ್ಲಿನ್ ಪ್ರಧಾನಿ ನರೇಂದ್ರ ಮೋದಿಯವರಲ್ಲೂ ಸಂತಾಪ ಸೂಚಿಸಿದ್ದಾರೆ. ಸಂತೋಷ್ ಇಸ್ರೇಲ್ ಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಸೌಮ್ಯಾ ನಿಧನರಾದ ಸ್ಥಳವನ್ನು ನೋಡಬೇಕೆಂದು ಕೇಳಿಕೊಂಡರು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಾಯವನ್ನು ನೀಡುವುದಾಗಿ ಇಸ್ರೇಲ್ ಅಧ್ಯಕ್ಷರು ಹೇಳಿದ್ದಾರೆ. ಸೌಮ್ಯಾ ಸಾವನ್ನಪ್ಪಿ ಒಂದು ವಾರ ಕಳೆದಿದ್ದರೂ ಈತನಕ ರಾಜ್ಯ ಸರ್ಕಾರವಾಗಲಿ, ಪ್ರತಿನಿಧಿಗಳಾಗಲಿ ಸೌಮ್ಯಾ ಅವರ ಕುಟುಂಬವನ್ನು ಭೇಟಿಮಾಡುವುದಾಗಲಿ, ಸಂಪರ್ಕಿಸುವುದಾಗಲಿ, ನೆರವಿನ ಭರವಸೆಯನ್ನಾಗಲಿ ನೀಡಿಲ್ಲ. ಏತನ್ಮಧ್ಯೆ, ಇಸ್ರೇಲ್ ಅಧ್ಯಕ್ಷರು ಪೋನ್ ಮೂಲಕ ಸಂಪರ್ಕಿಸಿರುವುದು ಅಲ್ಲಿಯ ಆಡಳಿತ ಶೈಲಿಯ ಪ್ರತೀಕವಾಗಿ ಸ್ತುತ್ಯರ್ಹವೆಂದು ಶ್ಲಾಘನೆಗೊಳಗಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries