ನವದೆಹಲಿ: ಕೇರಳ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಿಗೇ ಆಮ್ ಆದ್ಮಿ ಪಕ್ಷದ ಸೋಷಿಯಲ್ ಮೀಡಿಯಾ ತಂಡ ಕೇರಳವನ್ನು ಅಭಿನಂದಿಸಿದೆ. ಡೆಟ್ಟೋಲ್ ಗಿಂತ ಕೇರಳದ ಸಾಧನೆ ಉತ್ತಮವಾಗಿದೆ ಎಂದು ತಂಡವು ಕಪಿಲ್ ಅವರ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಕೇರಳದಲ್ಲಿ ಎಲ್ಡಿಎಫ್ 100, ಯುಡಿಎಫ್ 40, ಬಿಜೆಪಿ ಶೂನ್ಯ ಮತ್ತು ಇತರರು ಶೂನ್ಯ ಸ್ಥಾನಗಳಿಂದ ತೃಪ್ತಿಪಟ್ಟುಕೊಂಡಿರುವರು. ಮೊದಲ ಹಂತದಲ್ಲಿ ನೇಮಂ, ಪಾಲಕ್ಕಾಡ್ ಮತ್ತು ತ್ರಿಶೂರ್‍ಗ ಳಲ್ಲಿ ಬಿಜೆಪಿ ಮುಂದಿತ್ತು. ಆದರೆ ಕೊನೆಯ ಹಂತದಲ್ಲಿ ಅದು ಶೂನ್ಯಕ್ಕೆ ಇಳಿಯಿತು. ಕೇರಳದ ಒಬ್ಬ ಬಿಜೆಪಿ ನಾಯಕರೂ ಸೋಲಿನ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಎಲ್ ಡಿ ಎಫ್ ಅಭ್ಯರ್ಥಿ ವಿ ಶಿವನ್‍ಕುಟ್ಟಿ ಜಯಗಳಿಸಿದ್ದಾರೆ. ಶಿವನ್ ಕುಟ್ಟಿ 5571 ಮತಗಳ ಅಂತರದಿಂದ ಗೆದ್ದಿರುವರು. ಬಿಜೆಪಿ ಅಭ್ಯರ್ಥಿ ಕುಮ್ಮನಂ ರಾಜಶೇಖರನ್ ಅವರು ಎರಡನೇ ಸ್ಥಾನಕ್ಕೆ ಮತ್ತು ಯುಡಿಎಫ್ ಅಭ್ಯರ್ಥಿ ಕೆ ಮುರಳೀಧರನ್ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಶಾಫಿ ಪರಂಪಿಲ್ ಪಾಲಕ್ಕಾಡ್ ನಲ್ಲಿ ಎನ್‍ಡಿಎ ಅಭ್ಯರ್ಥಿ ಇ ಶ್ರೀಧರನ್ ಅವರನ್ನು 3840 ಮತಗಳ ಅಂತರದಿಂದ ಸೋಲಿಸಿದರು. ಇಲ್ಲಿ ಶಾಪಿ ಮೂರನೇ ಬಾರಿ ಗೆಲುವು ಸಾಧಿಸಿದ್ದಾರೆ.





