ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ವ್ಯಾಪಕತೆ ಹೆಚ್ಚಳಗೊಳ್ಳುತ್ತಿರುವ ಮಧ್ಯೆ ನಿನ್ನೆ ಇನ್ನಷ್ಟು ಕೋವಿಡ್ ಲಸಿಕೆಗಳು ರಾಜ್ಯವನ್ನು ತಲುಪಿದೆ. ನಾಲ್ಕು ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ತಿರುವನಂತಪುರಗೆ ತಲುಪಿಸಲಾಯಿತು. ಲಸಿಕೆಯನ್ನು ಇಂದು ಎರ್ನಾಕುಳಂ ಮತ್ತು ಕೋಝಿಕೋಡ್ ವಿಭಾಗಗಳಿಗೆ ವಿತರಿಸಲಾಗುವುದು.
ಕೋವಿಶೀಲ್ಡ್ ಮತ್ತು ಕೊವಾಕ್ಸ್ ಲಸಿಕೆಗಳ ಎರಡು ಲಕ್ಷ ಡೋಸ್ ಲಸಿಕೆಗಳು ನಿನ್ನೆ ವರೆಗೆ ರಾಜ್ಯದಲ್ಲಿ ದಾಸ್ತಾನಿತ್ತು. ಈ ಮಧ್ಯೆ ನಿನ್ನೆ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗಿದೆ. ವ್ಯಾಕ್ಸಿನೇಷನ್ ಹೆಚ್ಚಿಸುವ ಭಾಗವಾಗಿ ರಾಜ್ಯಕ್ಕೆ ಹೆಚ್ಚಿನ ಲಸಿಕೆಗಳನ್ನು ನೀಡಲಾಯಿತು.
ಆದರೆ, 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರದಿಂದ ಯಾವುದೇ ಅಧಿಕೃತ ಸೂಚನೆಗಳು ಬಂದಿಲ್ಲ. ಅದು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂಬ ಮಾಹಿತಿ ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಕೋವಿನ್ ಮತ್ತು ಆರೋಗ್ಯ ಸೇತು ಅಪ್ಲಿಕೇಶನ್‍ಗಳಲ್ಲಿ ವ್ಯಾಕ್ಸಿನೇಷನ್ ನೋಂದಣಿ ಪ್ರಗತಿಯಲ್ಲಿದೆ.





