ತಿರುವನಂತಪುರ: ಕೇರಳದಲ್ಲಿ ಕೋವಿಡ್ ಸೋಂಕು ಉತ್ತುಂಗಕ್ಕೇರಲು ಇನ್ನಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಹರಡುವಿಕೆ ಹೆಚ್ಚಳಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು.ಈವರೆಗೆ ಒಂದು ಹನಿ ಲಸಿಕೆ ಕೂಡ ವ್ಯರ್ಥವಾಗಲಿಲ್ಲ ಮತ್ತು ಇನ್ನು ಆಗುವುದೂ ಇಲ್ಲ ಎಂದು ಸಿಎಂ ಹೇಳಿದರು.
ರಾಜ್ಯವು 73,38,860 ಡೋಸ್ ಲಸಿಕೆಗಳನ್ನು ಕೇಂದ್ರ ಸರ್ಕಾರದಿಂದ ಪಡೆದಿದೆ. ಆ ಲಸಿಕೆ ಸಂಪೂರ್ಣ ಬಳಸಲಾಯಿತು. ಒಂದು ಹನಿ ಕೂಡ ವ್ಯರ್ಥ ಮಾಡದೆ ಅದನ್ನು ಬಹಳ ಎಚ್ಚರಿಕೆಯಿಂದ ಬಳಸುವುದರಿಂದ ಹೆಚ್ಚುವರಿ ಡೋಸ್ ನ್ನು ಜನರಿಗೆ ನೀಡಬಹುದು ಎಂದು ಸಿಎಂ ಹೇಳಿದರು.





