HEALTH TIPS

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳ: ಕಟ್ಟುನಿಟ್ಟಿನ ನಿಯಂತ್ರಣದ ಸೂಚನೆ ನೀಡಿದ ಮುಖ್ಯಮಂತ್ರಿ

                                      

          ತಿರುವನಂತಪುರ: ರಾಜ್ಯದ  ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕಟ್ಟುನಿಟ್ಟಿನ ನಿಯಂತ್ರಣ ಇರುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ರಾಜ್ಯಕ್ಕೆ ಮಂಗಳವಾರ ಎರಡು ಲಕ್ಷ ಹೆಚ್ಚುವರಿ ಡೋಸ್ ಲಸಿಕೆಗಳು ಆಗಮಿಸಿದ್ದು 2.40 ಲಕ್ಷ ಡೋಸ್ ಲಸಿಕೆ ದಾಸ್ತಾನು ಇದೆ. ಇನ್ನಷ್ಟು ಲಸಿಕೆಗಳು ಆಗಮಿಸುವ ನಿರೀಕ್ಷೆ ಇದೆ. ರಿಟನಿರ್ಂಗ್ ಅಧಿಕಾರಿಗಳನ್ನು ಸಹ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ರೋಗದ ಹರಡುವಿಕೆಯು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

             ರಾಜಿ ಮಾಡಿಕೊಳ್ಳದೆ ಗ್ರಾಮೀಣ ಪ್ರದೇಶದಲ್ಲಿ ನಿಯಂತ್ರಣ ಜಾರಿಗೆ ತರಲಾಗುವುದು. ಸ್ಥಳೀಯ ಅಧಿಕಾರಿಗಳು ಅದನ್ನು ಖಚಿತಪಡಿಸಿಕೊಳ್ಳಬೇಕು. ಮನೆಗಳ ಕ್ವಾರಂಟೈನ್ ಗಳಲ್ಲಿರುವವರು ಆರೋಗ್ಯ ಇಲಾಖೆ ನೀಡಿದ ಸೂಚನೆಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. ಆಮ್ಲಜನಕ ಮೀಟರ್ನೊಂದಿಗೆ ಆಮ್ಲಜನಕದ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಬೇಕು. ಯಾವುದೇ ತೊಂದರೆಗಳು ಇದ್ದಲ್ಲಿ, ವಾರ್ಡ್ ಸದಸ್ಯರು ಅಥವಾ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು. ಯಾರಿಗೂ ಚಿಕಿತ್ಸೆ ಲಭ್ಯವಾಗದ ಸ್ಥಿತಿ ನಿರ್ಮಾಣವಾಗಕೂಡದು ಎಂದು ಸಿಎಂ ಹೇಳಿದರು.

                    ಕೆಟಿಡಿಸಿ ಹೋಟೆಲ್‍ಗಳಲ್ಲಿ ಚಿಕಿತ್ಸೆ ನೀಡುವ ಕೇಂದ್ರಗಳು ಇರಲಿವೆ. ಇದು ವಿಕ್ಟರ್ಸ್ ಚಾನೆಲ್ ಮೂಲಕ ರೋಗಿಗಳ ಸಮಾಲೋಚನೆಗೆ ಸಹಕಾರಿಯಾಗಲಿದೆ. ಯಾರಿಗೂ ಚಿಕಿತ್ಸೆ ನೀಡದೆ ಇರಲಾಗದು. ಸಾಧ್ಯವಾದಷ್ಟು ಮನೆಯಿಂದ ಹೊರಬಾರದಿರುವುದನ್ನು ಪಾಲಿಸಬೇಕು. ಇದರಿಂದ ಮನೆಗಳಿಗೆ ರೋಗ ಹರಡುವುದನ್ನು ನಿಯಂತ್ರಿಸಬಹುದೆಂದು ಅವರು ಹೇಳಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries