ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಎರಡನೇ ತರಂಗದ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿನ್ನೆಯಿಂದ ಲಾಕ್ ಡೌನ್ ಸಮಾಂತರ ನಿಯಂತ್ರಣಗಳನ್ನು ಹೇರಲಾಗಿದೆ. ಕಚೇರಿಗಳ ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಹೆಚ್ಚಿನ ನಿರ್ಬಂಧಗಳನ್ನು ಇದರೊಂದಿಗೆ ವಿಧಿಸಿದೆ.
ನಿನ್ನೆಯಿಂದ ಕೇವಲ 25 ಶೇಕಡಾ ನೌಕರರು ಮಾತ್ರ ಕಚೇರಿಗಳಿಗೆ ಆಗಮಿಸಲು ಸೂಚಿಸಲಾಗಿದೆ. ಉಳಿದವರಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ನಿರ್ದೇಶನ ನೀಡಲಾಗಿದೆ. ಈ ಆದೇಶವು ಸರ್ಕಾರಿ ಮತ್ತು ಖಾಸಗಿ ಕಂಪನಿಗಳಿಗೆ ಅನ್ವಯಿಸುತ್ತದೆ.
ಇದೇ ವೇಳೆ ರಾಜ್ಯವು ಲಾಕ್ ಡೌನ್ ಗೆ ಹೋಲುವ ಆದರೆ ಕಡಿಮೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದೆ. ಮೇ 4 ರಿಂದ 9 ರವರೆಗೆ ನಿರ್ಬಂಧಗಳು ಜಾರಿಯಲ್ಲಿರಲಿವೆ. ಬ್ಯಾಂಕುಗಳು ಸಹ ಈ ರೀತಿಯಾಗಿ ಕಾರ್ಯನಿರ್ವಹಿಸಬೇಕು. ನಿನ್ನೆಯಿಂದ ಅಗತ್ಯ ಸೇವೆಗಳನ್ನು ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ. ಆರೋಗ್ಯ ಸಂಸ್ಥೆಗಳು, ಲ್ಯಾಬ್‍ಗಳು, ಔಷಧಾಲಯಗಳು, ಕಿರಾಣಿ ಅಂಗಡಿಗಳು (ಬೇಕರಿಗಳು ಸೇರಿದಂತೆ), ಅಂಚೆ / ಕೊರಿಯರ್ ಸೇವೆಗಳು, ಖಾಸಗಿ ಸಾರಿಗೆ ಸಂಸ್ಥೆಗಳು ಮತ್ತು ಟೆಲಿಕಾಂ / ಇಂಟರ್ನೆಟ್ ಸೇವೆಗಳಿಗೆ ರಿಯಾಯಿತಿಗಳು ಲಭ್ಯವಿದೆ.





