HEALTH TIPS

ಕೋವಿಡ್ ಪರೀಕ್ಷೆಯ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಶೋಷಣೆ! ಕೋವಿಡ್ ಪರೀಕ್ಷೆಗೆ ಬರುವವರಿಗೆ ಆಸ್ಪತ್ರೆ ಸೇವೆ ಅಗತ್ಯವಿಲ್ಲದಿದ್ದರೂ ಅಡ್ಮಿಶನ್ ಶುಲ್ಕ ವಸೂಲಿ!

                                            

                 ಪಾಲಾ: ಕೋವಿಡ್ ಪರೀಕ್ಷೆಯ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಶೋಷಣೆಗೊಳಪಡಿಸುವ  ಹೊರತಾಗಿ, ಅನಗತ್ಯ ಕಿರುಕುಳದ ದೂರುಗಳೂ ಕೇಳಿಬಂದಿದೆ.

                ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗೆ ವಿಧಿಸುವ ನಿಗದಿತ ಶುಲ್ಕದ ಜೊತೆಗೆ, ಪರೀಕ್ಷೆಗೆ ಬರುವವರು ದಾಖಲಾತಿ ಶುಲ್ಕವನ್ನೂ ಪಾವತಿಸಬೇಕೆಂದು ಹೊಸ ಬೇಡಿಕೆಗಳನ್ನು ಖಾಸಗೀ ಆಸ್ಪತ್ರೆಗಳು ವಿಧಿಸಿರುವುದು ಬೆಳಕಿಗೆ ಬಂದಿದೆ. ಅಡ್ಮಿಶನ್ ಶುಲ್ಕ  100 ರಿಂದ 150 ರೂ.ಗಳ ವರೆಗೆ ವಸೂಲು ಮಾಡಲಾಗುತ್ತದೆ. ಕೋವಿಡ್ ಪರೀಕ್ಷೆಗೆ 350 ರೂ. ಬೇರೆಯೇ ವಸೂಲಿಮಾಡಲಾಗುತ್ತದೆ.

                ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬಯಸುವವರಿಗೆ ನೋಂದಣಿ ಎಂಬ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಕೋವಿಡ್ ಪರೀಕ್ಷಿಸಲು ಬರುವವರು ಕೋವಿಡ್ ಇದ್ದರೂ ಇಲ್ಲದಿದ್ದರೂ ಇವಿಷ್ಟು ಶುಲ್ಕಗಳನ್ನು ಪಾವತಿಸಲೇಬೇಕಾಗಿದೆ. 

              ಆದರೆ ಇಷ್ಟಕ್ಕೇ ಮುಗಿಯಿತೆಂದು ಭಾವಿಸದಿರಿ. ಹಣವಷ್ಟೇ ಹಿಂಡಿದರೆ ಸಾಕಾಗದ ಖಾಸಗೀ ಆಸ್ಪತ್ರೆಗಳು ತಪಾಸಣೆಗೆ ಬರುವವರಿಗೆ ಸಾಧ್ಯವಾದಷ್ಟು ಕಷ್ಟವಾಗುವಂತೆ ಮಾಡಲೋ ಎಂಬಂತೆ ಕನಿಷ್ಠ 5 ಸರತಿ ಸಾಲಿನಲ್ಲಿ ನಿಂತು ಪರೀಕ್ಷಾ ಫಲಿತಾಂಶಗಳನ್ನು ಪಡೆಯಬೇಕೆಂಬ ಕಾನೂನನ್ನೂ ಜಾರಿಗೆ ತಂದಿದೆ. 

             ಎಡ್ಮಿಶನ್ ಪಡೆಯಲು, ನೋಂದಾಯಿಸಲು, ಮತ್ತು ನಂತರ ಪಾವತಿಸಲು, ಲ್ಯಾಬ್‍ನಲ್ಲಿ ಪರೀಕ್ಷಿಸಲು ಮತ್ತು ಅಂತಿಮವಾಗಿ ಪರೀಕ್ಷಾ ಫಲಿತಾಂಶಗಳನ್ನು ಪಡೆಯಲು ಪ್ರತ್ಯೇಕವಾದ ಸರದಿಗಳಲ್ಲಿ ನಿಲ್ಲಬೇಕು. ಪ್ರತಿಯೊಂದೂ ವಿಭಿನ್ನ ಸ್ಥಳದಲ್ಲಿದೆ (ಉದಾ. ಮೇಲಂತಸ್ಥು -ಕೆಳ ಅಂತಸ್ತು...ಇತ್ಯಾದಿ)

                 ಅನಗತ್ಯವಾಗಿ ಸತಾಯಿಸುವ ಬದಲು ಅಡ್ಮಿಶನ್ ಮಾಡುವಲ್ಲೇ ನೋಂದಣಿ ಶುಲ್ಕ ಕೌಂಟರ್ ವ್ಯವಸ್ಥೆಗೊಳಿಸಿದ್ದರೆ  3 ಹಂತದ ಕ್ಯೂ ನ್ನು ವಿಲೀನಗೊಳಿಸಬಹುದಾಗಿತ್ತು. ಉಳಿದ ಲ್ಯಾಬ್ ಮತ್ತು   ಪರೀಕ್ಷಾ ಫಲಿತಾಂಶಗಳಿಗೆ ಸರತಿ ಇದ್ದರೆ ಸುಲಭವಾಗುತ್ತಿತ್ತು. ಆಗಮಿಸುವ ಅರ್ಧದಷ್ಟು ಜನರು ಕೋವಿಡ್ ಪಾಸಿಟಿವ್ ಆಗಿದ್ದು, ಅವರು ಈ ಸರತಿಯಲ್ಲಿ ನಿಲ್ಲುತ್ತಾರೆ.

               ಇಲ್ಲಿ ಯಾವುದೇ ಸಾಮಾಜಿಕ ಅಂತರಗಳಿರುವುದಿಲ್ಲ. ಡಬಲ್ ಮಾಸ್ಕ್ ನ್ನು ಖಚಿತಪಡಿಸಿಕೊಳ್ಳಲು ಯಾವುದೇ ಕಾರ್ಯವಿಧಾನಗಳೂ ಇರುವುದಿಲ್ಲ. ಪರೀಕ್ಷಾ ಫಲಿತಾಂಶಗಳು ಹೊರಬಂದಾಗ ಮುಂದೆ ಮತ್ತು ಹಿಂದೆ ಇರುವವರು ಸಕಾರಾತ್ಮಕವಾಗಿರುತ್ತಾರೆ. ಅದರೊಂದಿಗೆ, ನಕಾರಾತ್ಮಕ ಪ್ರಮಾಣಪತ್ರವನ್ನು ಪಡೆದ ವ್ಯಕ್ತಿಯಿದ್ದರೆ ಅದರಲ್ಲಿ ನಿರ್ಣಯವಾಗುತ್ತದೆ! 

                  ಆರೋಗ್ಯ ಕಾರ್ಯಕರ್ತರು ಇನ್ನಾದರೂ ಗಮನ ನೀಡದಿದ್ದಲ್ಲಿ ಇಂತಹ ವ್ಯವಸ್ಥೆಗಳೇ ಪ್ರಸರಣ ಕೇಂದ್ರಗಳಾಗಿ ಪರಿಣಮಿಸಬಹುದು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries