ಕಾಸರಗೋಡು: ರೆಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಶಿಯನ್ನರು ಮೃತಪಟ್ಟರೆ ಯಾ ಪ್ರಾಕ್ಟೀಸ್ ಕೊನೆಗೊಳಿಸಿದ್ದಲ್ಲಿ, ನೋಂದಣಿ ಸರ್ಟಿಫಿಕೆಟ್ ಕೌನ್ಸಿಲ್‍ಗೆ ಮರಳಿ ಸಲ್ಲಿಸಬೇಕು ಎಂದು ತಿರುವನಂತಪುರಂ-ಕೊಚ್ಚಿ ಮೆಡಿಕಲ್ ಕೌನ್ಸಿಲ್ ರೆಜಿಸ್ತ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂತಹ ನೋಂದಣಿ ಬಳಸಿ ಕೆಲವರು ಪ್ರಾಕ್ಟೀಸ್ ನಡೆಸುತ್ತಿರುವ ಮಾಹಿತಿ ಕೌನ್ಸಿಲ್ ಗೆ ಲಭಿಸಿರುವ ಹಿನ್ನೆಲೆಯಲ್ಲಿ ಈ ಆದೇಶ ಪ್ರಕಟಿಸಲಾಗಿದೆ.

