ಕಾಸರಗೋಡು: ಕಾಸರಗೋಡು ಜಿಲ್ಲೆಯ ಪರಿಶಿಷ್ಟ ಜಾತಿ-ಪಂಗಡ ಕಾಲನಿಗಳಲ್ಲಿ ವಾಕ್ಸಿನೇಷನ್ ತುರ್ತಾಗಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಟಾಸ್ಕ್ ಫೆÇೀರ್ಸ್ ಸಭೆಯಲ್ಲಿ ಅವರು ಮಾತನಾಡಿದರು.
ಈಗ ಜಿಲ್ಲೆಯ ಕಾಲನಿಗಳಿಗೆ ನೇರವಾಗಿ ತೆರಳಿ ವಾಕ್ಸಿನೇಷನ್ ಸಂಬಂಧ ನೋಂದಣಿ ನಡೆಸಲಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ 12ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ವಾಕ್ಸಿನೇಷನ್ ಗಿರುವ ಸೌಲಭ್ಯ ಸಜ್ಜುಗೊಳಿಸುವಂತೆ ಜಿಲ್ಲಾಧಿಕಾರಿ ಆರೋಗ್ಯ ಇಲಾಖೆಗೆ ಆದೇಶಿಸಿದರು. ಹಾಸುಗೆ ಹಿಡಿದಿರುವ ರೋಗಿಗಳಿಗೆ, ವಿಶೇಷಚೇತನರಿಗೆ ಅವರ ಮನೆಗಳಿಗೆ ತೆರಳಿ ವಾಕ್ಸಿನೇಷನ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ವಿಶೇಷಚೇತನರಿಗೆ ವಾಕ್ಸಿನೇಷನ್ ನೋಂದಣಿಗೆ ಡಿಸೆಬಿಲಿಟಿ ಸರ್ಟಿಫಿಕೆಟ್ ಸಾಕಾಗುತ್ತದೆ. ಟ್ರಾನ್ಸ್ ಜೆಂಡರ್ ಗಳಿಗೆ ಒಂದು ಕೇಂದ್ರದಲ್ಲಿ ವಾಕ್ಸಿನೇಷನ್ ನೀಡಲು ಜಿಲ್ಲಾಧಿಕಾರಿ ಆದೇಶ ನೀಡಿದರು.
ಎದೆಹಾಲು ನೀಡುವ ತಾಯಂದಿರು ವಾಕ್ಸಿನೇಷನ್ ಸ್ವೀಕರಿಸಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಜಿಲ್ಲೆಯಲ್ಲಿ ಸದ್ರಿ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲೂ, ಖಾಸಗಿ ವಲಯದ 28 ಕೇಂದ್ರಗಳಲ್ಲೂ ಕೋವಿಡ್ ಟೆಸ್ಟ್ ಗೆ ಸೌಲಭ್ಯಗಳಿವೆ ಎಂದು ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ಜಿಲ್ಲಾ ಮಟ್ಟದ ಸಿಬ್ಬಂದಿ, ಜಿಲ್ಲೆಯ ವೈದ್ಯಾಧಿಕಾರಿಗಳು, ವೈದ್ಯರ ಸಂಘಟನೆಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.
.


