ಮಂಜೇಶ್ವರ: ವಿಶ್ವ ಹಿಂದು ಪರಿಷತ್ತು ಮಂಗಳೂರು ಗ್ರಾಮಾಂತರ ಕಾಸರಗೋಡು ಜಿಲ್ಲೆಯ ವತಿಯಿಂದ ಅರಣ್ಯ ಇಲಾಖೆ ಕಾಸರಗೋಡಿನಿಂದ ಫಲ ವಸ್ತುಗಳ ಗಿಡಗಳನ್ನು ಪಡೆದು ಜಿಲ್ಲೆಯಾದ್ಯಂತ ನೆಡುವ ಕಾರ್ಯಕ್ರಮ ನಡೆಯುತ್ತಿದ್ದು, ಮಂಜೇಶ್ವರ ಪ್ರಖಂಡದಲ್ಲಿ ಪ್ರಖಂಡದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಪಾವೂರು ಉಪಖಂಡ ಸಮಿತಿಯ ಮಾತೃ ಶಕ್ತಿಯ ಅಧ್ಯಕ್ಷೆ ಶೋಭಾ ಶೆಟ್ಟಿಯವರಿಗೆ ಕೊಟ್ಟು ಚಾಲನೆ ನೀಡಿದರು.
ಉಪಾಧ್ಯಕ್ಷೆ ಪ್ರೇಮ ಶೆಟ್ಟಿ, ವತ್ಸಲ, ವಿನುತ ಶೆಟ್ಟಿ, ಸದಾನಂದ ಶೆಟ್ಟಿ ಮುಗೇರುಗುತ್ತು, ಕಿಶೋರಿ ಕುಂಜತ್ತೂರು ,ಪ್ರಶಾಂತ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಅಧ್ಯಕ್ಷತೆ ವಹಿಸಿ ಫಲವಸ್ತುಗಳ ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಮನುಷ್ಯರು, ಪ್ರಾಣಿ, ಪಕ್ಷಿ ಸಂಕುಲಗಳು ಆಹಾರವಾಗಿ ಯತೇಚ್ಚವಾಗಿ ತಿಂದು ಸಂತೃಪ್ತ ವಾಗುವುದಲ್ಲದೆ, ಇದರಿಂದ ಪುಣ್ಯ ಪ್ರಾಪ್ತವಾಗುವುದು. ವಿಶ್ವ ಹಿಂದೂ ಪರಿಷತ್ತಿನ ಹಲವು ಸೇವೆಗಳೊಂದಿಗೆ ಇದು ಕೂಡಾ ಒಂದು ಎ0ದು ಶುಭ ಹಾರೈಸಿದರು.





