ಮಂಗಳೂರು: ರಕ್ತ ದಾನಕ್ಕಿಂತ ಮಿಗಿಲಾದ ದಾನ ಇನೊಂದಿಲ್ಲ. ಒಬ್ಬರ ಪ್ರಾಣವನ್ನು ಉಳಿಸಿ ರಕ್ತದಾನ ಮಾಡುವವರು ಸಾಕ್ಷಾತ್ ದೇವರಂತೆ ಕಾಣುತ್ತಾರೆ. ಇದಕ್ಕೆ ಇಂದಿನ ಯುವಜನಾಂಗವೊಂದು ಸಾಕ್ಷಿಯಾಗಿದೆ.
ವಿದೇಶದಲ್ಲಿ ಉದ್ಯಮಿಯಾಗಿರುವ ಬಿಪಿನ್ ರೈ ಯವರ ಜನ್ಮ ದಿನಾಚರಣೆಯನ್ನು ಅವರ ಮಂಜೇಶ್ವರ ವ್ಯಾಪ್ತಿಯ ಅಭಿಮಾನಿಗಳು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಸುಮಾರು 150 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಗಮನ ಸೆಳೆದರು. ಅಲ್ಲದೆ ಅನಾಥಾಶ್ರಮಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಮಧ್ಯಾಹ್ನದ ಭೋಜನವನ್ನು ಏರ್ಪಡಿಸಿದರು ಈ ಸಂದರ್ಭದಲ್ಲಿ ವರುಣ್ ಹೆಗ್ಡೆ, ಭರತ್ ಕುಮ್ಡೇಲ್ ಪ್ರೀತೇಶ್ ಅಂಚನ್, ಪ್ರೀತಮ್ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.






