ಕಾಸರಗೋಡು: ಸಾಂಸ್ಕøತಿಕ ಪಠ್ಯದಲ್ಲಿ ಅಂತರ್ಗತವಾಗಿರುವ ಎಲ್ಲ ಕಲೆ ಸಾಹಿತ್ಯಪಠ್ಯಗಳು ಸಮಾಜದ ಭಾವನೆಗಳನ್ನು ಪ್ರತಿಫಲಿಸುತ್ತವೆ. ಬರಹಗಾರರು ಹಾಗೂ ಕೃತಿಗಳು ಸಂಸ್ಕøತಿಯ ಉತ್ಪನ್ನಗಳು. ಪ್ರತಿಯೊಂದು ಕಲೆಯೂ ಕೂಡಾ ನಿರ್ದಿಷ್ಟ ಸಮಾಜದ ಪ್ರತಿಬಿಂಬವಾಗಿರುತ್ತದೆ. ಹಾಗಾಗಿ ಸಿನೆಮಾ, ನಾಟಕ ಮುಂತಾದವು ಜನರ ಆಶೋತ್ತರಗಳನ್ನು ಶಕ್ತವಾಗಿ ಹಿಡಿದಿಡುವ ಶಕ್ತಿಯನ್ನು ಹೊಂದಿರುತ್ತದೆ’ ಎಂಬುದಾಗಿ ಕೇರಳ ಕೇಂದ್ರೀಯ ವಿ.ವಿ ಯ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಪ್ರೊ ಅಮೃತ್ ಜಿ.ಕುಮಾರ್ ಅಭಿಪ್ರಾಯಪಟ್ಟರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನ ಕನ್ನಡ ವಿಭಾಗವು ಆಯೋಜಿಸಿದ ಸರಣಿ ಉಪನ್ಯಾಸ ‘ಸಾಹಿತ್ಯಯಾನ’ದ ಐದನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಟ, ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನ ‘ಕಾಸರಗೋಡು ಹವ್ಯಾಸಿ ರಂಗಭೂಮಿ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ‘ಕಾಸರಗೋಡಿನ ರಂಗತಂಡ, ಅದರ ಮುಖ್ಯಸ್ಥರು ಹಾಗೂ ನಾಟಕಗಳ ಬಗೆಗೆ ವಿಸ್ತøತವಾಗಿ ಮಾತನಾಡಿದ ಅವರು ಬಹುಭಾಷೆ ಮತ್ತು ಸಂಸ್ಕøತಿ ಕಾಸರಗೋಡಿನ ವಿಶೇಷತೆಯಾಗಿದ್ದು ಕಾಸರಗೋಡಿನಲ್ಲಿ ಸು.250 ರಂಗತಂಡಗಳಿವೆ. ಸಾಮಾಜಿಕ, ರಾಜಕೀಯ ಪ್ರಸ್ತುತತೆಯ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಹವ್ಯಾಸಿ ರಂಗಭೂಮಿ ಜನಜಾಗೃತಿಯನ್ನು ಮಾಡಿವೆ’ ಎಂದರು.
ಕೇಂದ್ರೀಯ ವಿ.ವಿ ಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ. ಮೋಹನ್ ಎ.ಕೆ ಅವರು ಉಪಸ್ಥಿತರಿದ್ದು ಮಾತನಾಡಿ ‘ನಾಟಕಗಳು ಇಂದು ಮನೋರಂಜನೆಗೆ ಸೀಮಿತಗೊಂಡಿಲ್ಲ, ಕಲೆ ಮತ್ತು ಸಂಸ್ಕøತಿಯನ್ನು ಬೆಳೆಸಿಕೊಂಡು ಹೋಗುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಅಂತಹ ಅವಕಾಶಗಳನ್ನು ಯುವಜನತೆ ಬಳಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಮಾಜದೊಂದಿಗೆ ಕೈಜೋಡಿಸುವುದಕ್ಕೆ ವಿಭಾಗವೂ ಸದಾ ಸಿದ್ಧವಿದೆ ಎಂದರು.
ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ನಿವೇದಿತಾ ಬಿ ಸ್ವಾಗತಿಸಿ, ಶಿವಕುಮಾರ್ ಜೆ ವಂದಿಸಿದರು. ಮಧುಶ್ರೀ ಎ ಕಾರ್ಯಕ್ರಮ ನಿರೂಪಿಸಿದರು.





