ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಾಂಸ್ಕøತಿಕ ಅಧ್ಯಯನ ಕೇಂದ್ರದಲ್ಲಿ ಶನಿವಾರ ವಿಷ್ಣುಶರಣ ಬನಾರಿ ಹಾಗೂ ಮನೆಯವರು ಸೇವಾರೂಪವಾಗಿ ಯಕ್ಷಗಾನ ತಾಳಮದ್ದಳೆ ಅತಿಕಾಯ ಮೋಕ್ಷ ಪ್ರಸ್ತುತಗೊಂಡಿತು.
ಆರಂಭದಲ್ಲಿ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜಾರ್ಚನೆ ಸಲ್ಲಿಸಲಾಯಿತು. ಬಳಿಕ ನಡೆದ ಯಕ್ಷಗಾನ ಕೂಟದಲ್ಲಿ ಭಾಗವತರಾಗಿ ವಿಶ್ವವಿನೋದ ಬನಾರಿ, ನಿತೀಶ್ ಕುಮಾರ್ ಎಂಕಣ್ಣಮೂಲೆ ಭಾಗವಹಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ನಾರಾಯಣ ಪಾಟಾಳಿ ಮಯ್ಯಾಳ, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಸಹಕರಿಸಿದರು. ಅರ್ಥಧಾರಿಗಳಾಗಿ ಬೆಳ್ಳಿಪ್ಪಾಡಿ ಸದಾಶಿವ ರೈ (ರಾವಣ) ಯಂ.ರಮಾನಂದ ರೈ ದೇಲಂಪಾಡಿ (ಅತಿಕಾಯ), ಸಂದೀಪ್ ವಾಲ್ತಾಜೆ (ಚಾರಕರು) ನಾರಾಯಣ ದೇಲಂಪಾಡಿ (ಶ್ರೀರಾಮ), ರಾಮಯ್ಯ ರೈ ಕಲ್ಲಡ್ಕ ಗುತ್ತು (ಲಕ್ಷ್ಮಣ), ಐತ್ತಪ್ಪ ಗೌಡ ಮುದಿಯಾರು (ವಿಭೀಷಣ), ಅವರು ತಮ್ಮ ಅರ್ಥಗಾರಿಕೆಯಿಂದ ತಾಳಮದ್ದಳೆಯನ್ನು ವೈಭವೀಕರಿಸಿದರು. ಲತಾ ಆಚಾರ್ಯ ಬನಾರಿ ಸ್ವಾಗತಿಸಿ ಪಾತ್ರ ಪರಿಚಯ ಮಾಡಿದರು. ಸರೋಜಿನಿ ಬನಾರಿ ವಂದಿಸಿದರು.




