ಕಾಸರಗೋಡು: ಕೋವಿಡ್ ಸೋಂಕು ಅಧಿಕಗೊಳ್ಳುತ್ತಿರುವ ವೇಳೆ ಕಾಸರಗೋಡು ಜಿಲ್ಲೆಯ ಕೆಲವೆಡೆ ಮಾಸ್ಕ್ ಸಹಿತ ಪ್ರತಿರೋಧ ಸಾಮಾಗ್ರಿಗಳಿಗೆ ಹೆಚ್ಚುವರಿ ದರ ಈಡುಮಾಡಲಾಗುತ್ತಿರುವ ಮತ್ತು ಕಳಪೆ ಗುಣಮಟ್ಟದ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿರುವ ದೂರುಗಳು ಲಭಿಸಿದ ಹಿನ್ನೆಲೆಯಲ್ಲಿಅವುಗಳ ಪತ್ತೆಗೆ ಜಿಲ್ಲಾ ಲೀಗಲ್ ಮೆಟ್ರೋಲಜಿ ಇಲಾಖೆ ರಂಗಕ್ಕಿಳಿದಿದೆ.
ಈ ನಿಟ್ಟಿನಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ನಡೆಸಿದ ತಪಾಸಣೆಯ ಹಿನ್ನೆಲೆಯಲ್ಲಿ 15 ಕೇಸುಗಳನ್ನು ದಾಖಲಿಸಲಾಗಿದೆ. ಮಾಸ್ಕ್ ಸಂಬಂಧ 13 ಕೇಸುಗಳು ದಾಖಲಾಗಿವೆ. ಸಾನಿಟೈಸರ್ ಸಹಿತ ಇತರ ಸಾಮಾಗ್ರಿಗಳಿಗೆ ಅಧಿಕ ಬೆಲೆ ಈಡುಮಾಡಿದ ಇತ್ಯಾದಿ ಆರೋಪದಲ್ಲಿ ಜೂನ್ ತಿಂಗಳ ಮೊದಲ ವಾರ 131 ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಗಿದೆ.
ಇಲಾಖೆಯ ಡೆಪ್ಯೂಟಿ ಕಂಟ್ರೋಲರ್ ಗಳಾದ ಪಿ.ಶ್ರೀನಿವಾಸ, ಎಸ್.ಎಸ್.ಅಭಿಲಾಷ್, ಸಹಾಯಕ ಕಂಟ್ರೋಲರ್ ಗಳಾದ ಎಂ.ರತೀಶ್, ಶಶಿಕಲಾ ಕೆ., ರಮ್ಯಾ ಕೆ.ಎಸ್., ಸಿಬ್ಬಂದಿಗಳಾದ ಪವಿತ್ರನ್, ಶ್ರೀಜಿತ್, ರಾಬರ್ಟ್ ಪೇರೇರಾ, ಷಾಜಿ, ಮುಸ್ತಫಾ ಟಿ.ಕೆ., ಪಿ.ಅಜಿತ್ ಕುಮಾರ್ ಮೊದಲಾದವರು ತಪಾಸಣೆ ನಡೆಸಿದರು.



