ತಿರುವನಂತಪುರ: ಕೇರಳ 2020-21ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ನಿನ್ನೆ ಪ್ರಕಟಿಸಿದರು. ಉತ್ತೀರ್ಣತೆ ಶೇ. 99.47.ಆಗಿದೆ. ಕಳೆದ ವರ್ಷ ಉತ್ತೀರ್ಣ ಶೇಕಡಾ 98.82 ಆಗಿತ್ತು. ಈ ಬಾರಿ ಪರೀಕ್ಷೆ ಮತ್ತು ಮೌಲ್ಯಮಾಪನವು ಕೊರೋನಾ ಹಿನ್ನೆಲೆಯಲ್ಲಿ ಅಲ್ಪ ತಡವಾಗಿ ನಡೆದಿತ್ತು. ಆದರೆ ಕೋವಿಡ್ ಅವಧಿಯಲ್ಲಿ ಕಲೋತ್ಸವ, ಕ್ರೀಡೋತ್ಸವಗಳಂತಹ ಪಠ್ಯೇತರ ಚಟುವಟಿಕೆಗಳು ನಡೆಯದಿರುವುದರಿಂದ ಗ್ರೇಸ್ ಮಾಕ್ರ್ಸ್ ಇರಲಿಲ್ಲ. ಆದರೆ ಮೌಲ್ಯಮಾಪನ ಉದಾರವಾಗಿತ್ತು ಎಂದು ಫಲಿತಾಂಶಗಳ ಅಂಕಿಅಂಶ ದೃಢಪಡಿಸಿದೆ.
ಪರೀಕ್ಷಾ ಫಲಿತಾಂಶಗಳಿಗಾಗಿ ವೆಬ್‍ಸೈಟ್‍ಗಳು
https://keralapareekshabhavan.in
https://sslcexam.kerala.gov.in
www.results.kite.kerala.gov.in





