ಕೋಝಿಕ್ಕೋಡ್: ಇಂದಿನಿಂದ ರಾಜ್ಯಾದ್ಯಂತ ಅಂಗಡಿಗಳನ್ನು ಸಂಪೂರ್ಣ ತೆರೆದು ಪ್ರತಿಭಟಿಸುವ ನಿರ್ಧಾರದಿಂದ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ತಾತ್ಕಾಲಿಕವಾಗಿ ಹಿಂದೆ ಸರಿದಿರುವುದಾಗಿ ಕೆವಿವಿಇಎಸ್ ಸಮಿತಿಯ ರಾಜ್ಯ ಅಧ್ಯಕ್ಷ ಟಿ.ನಾಸರುದ್ದೀನ್ ಘೋಷಿಸಿರುವರು. ಮುಖ್ಯಮಂತ್ರಿ ನೇರವಾಗಿ ಕರೆ ಮಾಡಿ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದ್ದರ ಹಿನ್ನೆಲೆಯಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಶುಕ್ರವಾರ ಮುಖ್ಯಮಂತ್ರಿಯೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಯವರ ಆಶ್ವಾಸನೆಯ ಹಿನ್ನೆಲೆಯಲ್ಲಿ ಮುಷ್ಕರವನ್ನು ಸ್ಥಗಿತಗೊಳಿಸಲಾಗಿದೆ ಎಂದು ನಾಸರುದ್ದೀನ್ ಹೇಳಿದ್ದಾರೆ. ಆದರೆ ಇಂದು ವ್ಯಾಪಾರಿಗಳು ಮಧ್ಯಾಹ್ನದವರೆಗೆ ಅಂಗಡಿಗಳು ತೆರೆದು ಕಾರ್ಯವೆಸಗುವುದೆಂದು ಎಂದು ಅಚಲ ನಿರ್ಧಾರ ಪ್ರಕಟಿಸಿದ್ದರು. ಏತನ್ಮಧ್ಯೆ, ಕೋಝಿಕ್ಕೋಡ್ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಆದರೆ ಇದು ಕೂಡ ಯಶಸ್ವಿಯಾಗಲಿಲ್ಲ. ಬಳಿಕ ಮುಖ್ಯಮಂತ್ರಿ ನೇರವಾಗಿ ಅಧ್ಯಕ್ಷರನ್ನು ಕರೆದು ಚರ್ಚೆಗೆ ಆಹ್ವಾನ ನೀಡಿದರು ಎನ್ನಲಾಗಿದೆ.
ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕೆಂಬ ಸಾರ್ವಜನಿಕ ಭಾವನೆಯು ಹಿಮ್ಮೆಟ್ಟುತ್ತದೆ ಎಂಬ ಭಯದಿಂದಾಗಿ ಮುಖ್ಯಮಂತ್ರಿಯವರು ಚರ್ಚೆಗೆ ಮುಂದಾದರೇ ಎಂದು ತರ್ಕಿಸಲಾಗಿದೆ. ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಅವರು ವ್ಯಾಪಾರಿಗಳ ವಿರುದ್ದ ಮಾತನಾಡಿ, ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು ಮತ್ತು ಆಟಗಳು ಸಾಕು ಎಂಬ ಮುಖ್ಯಮಂತ್ರಿ ಹೇಳಿಕೆಯ ವಿರುದ್ಧ ಟೀಕೆ ಮತ್ತು ಪ್ರತಿಭಟನೆ ಬಲವಾಗಿತ್ತು.
ಬಾರ್‍ಗಳು ಮತ್ತು ಬಿವ್ಕೊ ಮಳಿಗೆಗಳನ್ನು ತೆರೆಯಲು ಅನುಮತಿಯ ಹೊರತಾಗಿಯೂ, ಕೆವಿವಿಇಎಸ್ ಸೇರಿದಂತೆ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳು ಅಂಗಡಿಗಳಿಗೆ ಮಾತ್ರ ವಿಧಿಸಿರುವ ನಿರ್ಬಂಧಗಳನ್ನು ವಿರೋಧಿಸಿದ್ದರು. ಕೊರೋನಾ ನಿಯಂತ್ರಣದ ಹೆಸರಿನಲ್ಲಿ ವ್ಯಾಪಾರಿಗಳಿಗೆ ಕಿರುಕುಳ ನೀಡುವುದನ್ನು ವಿರೋಧಿಸಿ ಈ ಹಿಂದೆ ಉಪವಾಸ ಸತ್ಯಾಗ್ರಹವನ್ನು ಕರೆಯಲಾಗಿತ್ತು. ಆದರೆ, ಸಕಾರಾತ್ಮಕ ಕ್ರಮಗಳ ಕೊರತೆಯನ್ನು ವಿರೋಧಿಸಿ ಸರ್ಕಾರದ ನಿರ್ಧಾರಕ್ಕಾಗಿ ಕಾಯದೆ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಸ್ವಯಂಪ್ರೇರಣೆಯಿಂದ ತೆರೆಯಲು ನಿರ್ಧರಿಸಿದರು. ಕೊರೊನಾ ಮಾನದಂಡಗಳಿಗೆ ಅನುಗುಣವಾಗಿ ಎಲ್ಲಾ ವ್ಯವಹಾರಗಳನ್ನು ತೆರೆಯಲು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.





