ಕಾಸರಗೋಡು: ಕೇರಳ ಎಸ್.ಎಸ್.ಎಲ್.ಸಿ.ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಕಾಸರಗೋಡು ಜಿಲ್ಲೆಗೆ ಶೇ 99.74: 4366 ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಲ್ಲಿ "ಎ ಪ್ಲಸ್" ಲಭಿಸಿದೆ.
ಕಳೆದ ವರ್ಷದ ಎಸ್.ಎಸ್.ಎಲ್.ಸಿ. ಫಲಿತಾಂಶಕ್ಕಿಂತ ಈ ಬಾರಿ ಶೇ 1.13 ಅಧಿಕವಾಗಿದೆ. ಜಿಲ್ಲೆಯಲ್ಲಿ ಪರೀಕ್ಷೆಗೆ 19621 ಮಂದಿ ಹಾಜರಾಗಿದ್ದು, ಇವರಲ್ಲಿ 10582 ಮಂದಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. ಇವರಲ್ಲಿ 5546 ವಿದ್ಯಾರ್ಥಿಗಳೂ, 5036 ಮಂದಿ ವಿದ್ಯಾರ್ಥಿನಿಯರೂ ಆಗಿದ್ದಾರೆ.
ಕಾಞಂಗಾಡು ಶೈಕ್ಷಣಿಕ ಜಿಲ್ಲೆಯಲ್ಲಿ ಶೇ 99.87 ಫಲಿತಾಂಶ ಬಂದಿದ್ದು, ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ ಶೇ 99.63 ಫಲಿತಾಂಶ ಲಭಿಸಿದೆ.
ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 10621 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 10582 ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. ಇವರಲ್ಲಿ 5546 ಮಂದಿ ಹುಡುಗರು, 5036 ಮಂದಿ ಹುಡುಗಿಯರು.
ಕಾಞಂಗಾಡು ಶೈಕ್ಷಣಿಕ ಜಿಲ್ಲೆಯಲ್ಲಿ 8716 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 8705 ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. ಇವರಲ್ಲಿ 4464 ಮಂದಿ ಹುಡುಗರು, 4241 ಮಂದಿ ಹುಡುಗಿಯರು.
ಕಾಞಂಗಾಡು ಶೈಕ್ಷಣಿಕ ಜಿಲ್ಲೆಯಲ್ಲಿ 2557 ಮಂದಿ, ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 1809 ಮಂದಿ ಎಲ್ಲ ವಿಷಯಗಳಲ್ಲಿ "ಎ ಪ್ಲಸ್" ಗಳಿಸಿದ್ದಾರೆ.
131 ಶಿಕ್ಷಣಾಲಯಗಳಿಗೆ ಶೇ 100 ಫಲಿತಾಂಶ
ಕಾಸರಗೋಡು ಜಿಲ್ಲೆಯಲ್ಲಿ 131 ಶಿಕ್ಷಣಾಲಯಗಳಿಗೆ ಶೇ 100 ಫಲಿತಾಂಶ ಬಂದಿದೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 35 ಸರಕಾರಿ, 10 ಅನುದಾನಿತ, 18 ಅನುದಾನ ರಹಿತ ಶಾಲೆಗಳಿಗೆ ಶೇ 100 ಫಲಿತಾಂಶ ಲಭಿಸಿದೆ. ಕಾಞಂಗಾಡು ಶೈಕ್ಷಣಿಕ ಜಿಲ್ಲೆಯಲ್ಲಿ 50 ಸರಕಾರಿ, 10 ಅನುದಾನಿತ, 8 ಅನುದಾನ ರಹಿತ ಶಾಲೆಗಳಿಗೆ ಶೇ 100 ಫಲಿತಾಂಶ ಬಂದಿದೆ.
ಫಲಿತಾಂಶ ವರ್ಧನೆ!|:
ಕಾಸರಗೋಡುಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ 1.13 ಫಲಿತಾಂಶದಲ್ಲಿ ಹೆಚ್ಚಳವುಂಟಾಗಿದೆ. ಕಳೆದ ಬಾರಿ ಶೇ 98.61 ಫಲಿತಾಂಶ ಬಮದಿತ್ತು. ಈ ಬಾರಿ ಅದು ಶೇ 99.74 ಆಗಿ ಅಧಿಕಗೊಂಡಿದೆ.
ಕಳೆದ ಬಾರಿ 1685 ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಲ್ಲಿ "ಎ ಪ್ಲಸ್" ಲಭಿಸಿತ್ತು. ಈ ಬಾರಿ 4366 ಮಂದಿ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಲ್ಲಿ "ಎ ಪ್ಲಸ್" ಬಂದಿದೆ.





