ಕಾಸರಗೋಡು: ಕೇರಳ ರಾಜ್ಯ ಸಂಸ್ಕøತ ಅಧ್ಯಾಪಕರ ಫೆಡರೇಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಕಚೇರಿಗೆ ವಿವಿಧ ಬೇಡಿಕೆ ಮುಂದಿರಿಸಿ ಧರಣಿ ಇತ್ತೀಚೆಗೆ ನಡೆಯಿತು.
ಕಿರಿಯ ಪ್ರಾಥಮಿಕ ಮಟ್ಟದ ಆನ್ ಲೈನ್ ತರಗತಿಗಳನ್ನು ಶೀಘ್ರ ಆರಂಭಿಸಬೇಕು, ಪಾಠಗಳ ಪ್ರಸಾರದ ವೇಳೆ ಉಂಟಾಗುವ ನ್ಯೂನತೆಗಳನ್ನು ಪರಿಹರಿಸಬೇಕು, ಎಲ್ಲಾ ಪಠ್ಯಗಳ ಬೋಧನೆಯಲ್ಲೂ ಸಮಾನತೆ ಕಾಯ್ದುಕೊಳ್ಳಬೇಕು, ಸ|ಂಸ್ಕøತ ಅಧ್ಯಯನಗೈಯ್ಯುವ ಕನ್ನಡ ಭಾಷಾ ಅಲ್ಪಸಂಖ್ಯಾತ ಮಕ್ಕಳ ಬೇಡಿಕೆ ಈಡೇರಿಸಬೇಕು ಎಂಬ ಬೇಡಿಕೆಗಳನ್ನು ಅ|ಧಿಕೃತರ ಗಮನಕ್ಕೆ ತರಲಾಯಿತು.
ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಕಾರ್ಯಾಲಯದ ಎದುರು ನಡೆದ ಪ್ರತಿಭಟನೆಯಲ್ಲಿ ಜಿಲ್ಲೆ ಹಾಗೂ ತಾಲೂಕುಗಳ ಪ್ರತಿನಿಧಿಗಳು ಕೋವಿಡ್ ಮಾನದಂಡಾನುಸಾರ ಭಾಗವಹಿಸಿದರು. ಜಿಲ್ಲೆಯ ಎಲ್ಲಾ ಸಂಸ್ಕøತ ಶಿಕ್ಷಕರು ಅವರವರ ಮನೆಯಲ್ಲಿ ಪ್ಲೆಕ್ಸ್ ಮೂಲಕ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪ್ರಸ್ತುತ ಕೈಟ್ ವಿಕ್ಟರ್ಸ್ ಚಾನೆಲ್ ಮೂಲಕ ರಾಜ್ಯಮಟ್ಟದ ಇತರ ತರಗತಿಗಳಂತೆ ಸಂಸ್ಕøತ ಪಾಠವೂ ಬಿತ್ತರಗೊಳ್ಳುತ್ತಿದ್ದು, ಮಲೆಯಾಳ ಮಾಧ್ಯಮದಲ್ಲಿದೆ. ಇದರಿಂದ ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗೆ ಭಾರೀ ತೊಡಕುಗಳಾಗುತ್ತಿದ್ದು, ಶೀಘ್ರ ಪರಿಹರಿಸುವಂತೆ ಒತ್ತಾಯಿಸಲಾಗಿದೆ.





