ಕುಂಬಳೆ: ಕಾಸರಗೋಡು ಬೇವಿಂಜೆಯ ಬಾಲಕೃಷ್ಣ ಕಲ್ಲುಕಳ ಎಂಬವರ ಪತ್ನಿ ರೆಜಿತಾ(30) ತನ್ನ 10, 4 ರ ಹರೆಯದ ಎರಡು ಗಂಡು ಮತ್ತು 8ವರ್ಷದ ಹೆಣ್ಣು ಮಗಳನ್ನು ಬಿಟ್ಟು ಮಕ್ಕಳಿರುವ ಶಮೀರ್(50) ಎಂಬ ಮುಸ್ಲಿಂ ವ್ಯಕ್ತಿ ಯೊಬ್ಬರೊಂದಿಗೆ ಪರಾರಿ ಯಾಗಿದ್ದು ಪತಿ ಪೋಲೀಸರಿಗೆ ಮತ್ತು ವಿಶ್ವ ಹಿಂದು ಪರಿಷತಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ತಕ್ಷಣ ಸ್ಪಂದಿಸಿದ ವಿಶ್ವಹಿಂದು ಪರಿಷ್ತತಿನ ನಿಯೋಗ ವೊಂದು ಅವರೊಟ್ಟಿಗೆ ತೆರಳಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿರಿಗೆ ದೂರನ್ನು ಕೊಟ್ಟಿದ್ದು ಡಿವೈ ಎಸ್ಪಿ ಯವರನ್ನು ಭೇಟಿಯಾಗಿ ತಕ್ಷಣ ಅವರನ್ನು ಹುಡುಕಿ ತರಬೇಕೆಂದು ಒತ್ತಾಯಿಸಲಾಗಿದೆ. ವಿಶ್ವ ಹಿಂದು ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಆರಿಬೈಲು, ಕಾರ್ಯದರ್ಶಿ ಶಂಕರ ಭಟ್ ಉಳುವಾನ, ಕಾಸರಗೋಡು ಪ್ರಖಂಡದ ಕಾರ್ಯದರ್ಶಿ ರವಿಚಂದ್ರ ಎಡನೀರು, ಮಂಜೇಶ್ವರ ಪ್ರಖಂಡದ ಕಾರ್ಯದರ್ಶಿ ಜನಾರ್ದನ ಆಚಾರ್ಯ ಹೊಸಂಗಡಿ, ಬಾಲಕೃಷ್ಣ ಬೇವಿಂಜ ಮತ್ತು ಕೃಷ್ಣನ್ ಬೋವಿಕ್ಕಾನ ಉಪಸ್ಥಿತರಿದ್ದರು.





